ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಜೇವರ್ಗಿ ಪಟ್ಟಣದಲ್ಲಿ ವೀರಶೈವ ಲಿಂಗಾಯತ ಸಮಾಜದ ಅಪ್ರಾಪ್ತ ಬಾಲಕಿಗೆ ಕಿರುಕುಳವನ್ನು ನೀಡಿ, ಆತ್ಮಹತ್ಯೆಗೆ ಕಾರಣವಾದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಇಂದು ಚಿಂಚೋಳಿ ತಾಲೂಕ ಬಸವಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ಮಾಡಲಾಯಿತು ಪ್ರತಿಭಟನೆ ಉದ್ದೇಶಿಸಿ ಬಸವಪರ ಸಂಘಟನೆಗಳ ಮುಖಂಡರಾದ ಶರಣು ಪಾಟೀಲ್ ಮೋತಕಪಳ್ಳಿ, ಅವರು ಮಾತನಾಡಿ ಜೇವರ್ಗಿ ತಾಲೂಕಿನಲ್ಲಿ ವೀರಶೈವ ಲಿಂಗಾಯತ ಸಮಾಜದ ಬಾಲಕಿಗೆ ಆತ್ಮಹತ್ಯೆ ಕಾರಣವಾದ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಇಂಥ ಘಟನೆಯು ಮರು ಆಗದಂತೆ ಕರ್ನಾಟಕ ಸರ್ಕಾರವು ಮುಂಜಾಗ್ರತ ಕ್ರಮ ವಹಿಸಿಕೊಳ್ಳಬೇಕೆಂದು.
ಪ್ರತಿಭಟನೆಯಲ್ಲಿ ಗೌತಮ್ ಪಾಟೀಲ್, ಅಜೀತ ಪಾಟೀಲ್, ಬಸವಣ್ಣಪ್ಪ ಪಾಟೀಲ್, ರವಿ ಪಾಟೀಲ್ ಕನಕಪೂರ, ಸಂಜೀವಕುಮಾರ್ ಪಾಟೀಲ್, ಜಗನ್ನಾಥ ಕಲ್ಲೂರ್, ನೀಲಕಂಠ ಸೀಳಿನ, ಅನೀಲ್ ಕಂಟ್ಲಿ, ವೀರೇಶ್ ದೇಸಾಯಿ, ಪವನ ಪಾಟೀಲ್, ವೀರೇಶ ಯಂಪಳ್ಳಿ, ವಿವೇಕ್ ಪಾಟೀಲ್, ಲಕ್ಷ್ಮಣ ಅವಂಟಿ, ಹನುಮಂತ್ ಪೂಜಾರಿ, ಜಗನ್ನಾಥ್ ಗೌತಮ್, ನಿತಿನ್ ಕುಮಾರ, ಸುರಿ ಸುಂಕದ, ಸಂಜು ಪಾಟೀಲ್ ಯಂಪಳ್ಳಿ, ಸೂರ್ಯಕಾಂತ್ ಹುಲಿ, ಗೋಪಾಲ ಗಾರಂಪಳ್ಳಿ, ಮತ್ತು ಅನೇಕ ಬಸವಪುರ ಸಂಘಟನೆಯ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ವರದಿ : ಸುನಿಲ್ ಸಲಗರ