ಕಾಗವಾಡ:ನ್ಯಾಯವಾದಿ ಪ್ರದೀಪ ಕಿರಣಗಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಗುರುವಾರ ಉಗಾರ ಬುದ್ರುಕ ಗ್ರಾಮಸ್ಥರು ಅಂಗಡಿ ಮುಂಗಟ್ಟಗಳನ್ನು ಬಂದು ಮಾಡುವ ಮುಖಾಂತರ ದಿವಂಗತ್ ಚೈತಾಲಿ ಅವರ ಕುಟುಂಬಕ್ಕೆ ನ್ಯಾಯ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಇನ್ನು ಈ ಸಮಯದಲ್ಲಿ ಮಾತನಾಡಿದ ಶೀತಲ ಪಾಟೀಲ ನ್ಯಾಯವನ್ನು ಕೊಡಿಸುವ ಮನುಷ್ಯ ಈ ರೀತಿ ನೀಚ ಕೃತ್ಯ ಮಾಡಿದ್ದಾನೆ ಅವನಿಗೆ ಗಲ್ಲು ಶಿಕ್ಣೆ ವಿಧಿಸಿ ಎಂದರು. ಗ್ರಾಮದ ಮುಖಂಡ ಹಾಗೂ ರಾಜಕಾರಣಿ ವಸಂತ ಖೋತ ಮಾತನಾಡಿ ಅವನ ಮಾಡಿದ್ದು ಈ ಕೃತ್ಯ ನೋಡಿದರೆ ಅವನು ಭೂಮಿ ಮೇಲೆ ಇರಲು ಯೋಗ್ಯ ಇಲ್ಲಾ ಎಂದರು. ಇವನ ಬಡ್ಡಿ ವ್ಯವಹಾರದಿಂದ ಕೆಲವು ಕುಟುಂಬಗಳು ಕಂಗಾಲಾಗಿದ್ದಾರೆ. ಕೆಲವರ ಚೆಕ್ ಬೌನ್ಸ ಅಂತಾ ಸುಳ್ಳು ಪ್ರಕರಣಗಳು ದಾಖಲಿಸಿದ್ದಾನೆ. ಇವೆಲ್ಲವನ್ನು ಪರಶೀಲಿಸಿ ಅವನಿಗೆ ಗಲ್ಲು ಶಿಕ್ಷೆ ಹಾಗೂ ಅವನ ಕುಟುಂಬವನ್ನು ಗಡಿಪಾರು ಮಾಡಬೇಕೆಂದು ಗ್ರೇಡ್ 2 ತಹಶೀಲ್ದಾರ ರಶ್ಮೀ ಜಕಾತಿ ಅವರಿಗೆ ಮನವಿ ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಮೋಹನ ಶಹಾ, ಬಾಬು ಅಕ್ಕಿವಾಟೆ , ವಜ್ರಕುಮಾರ ಮಗದುಮ್ಮ,ಶೀತಲ್ ಕುಂಬಾರ, ವಕೀಲರು ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು. ಇನ್ನು ಕಾಗವಾಡ ಪೊಲೀಸ್ ಠಾಣೆಯ ಪಿಎಸ್ಐ ರಾಘವೇಂದ್ರ ಖೋತ ನೇತೃತ್ವದಲ್ಲಿ ಬಿಗಿ ಬಂದೋಬಸ್ತ ನಿಯೋಜನೆ ಮಾಡಲಾಗಿತ್ತು.
ವರದಿ:ಚಂದ್ರಕಾಂತ ಕಾಂಬಳೆ




