Ad imageAd image

ಒಳ ಮಿಸಲಾತಿ ಜಾರಿಮಾಡುವಂತೆ ಒತ್ತಾಯಿಸಿ ಪ್ರತಿಭಟನೆ.

Bharath Vaibhav
ಒಳ ಮಿಸಲಾತಿ ಜಾರಿಮಾಡುವಂತೆ ಒತ್ತಾಯಿಸಿ  ಪ್ರತಿಭಟನೆ.
WhatsApp Group Join Now
Telegram Group Join Now

ಕಲಘಟಗಿ: ರಾಜ್ಯ ಸರಕಾರ ತಮ್ಮ ಪ್ರಣಾಲಿಕೆಯಲ್ಲಿ ಒಳಮಿಸಲಾತಿ ಜಾರಿ ಮಾಡುವುದಾಗಿ ಐದನೇ ಗ್ಯಾರಂಟಿಗಳ ಜೊತೆಗೆ ಆರನೇ ಗ್ಯಾರಂಟಿಯಾಗಿ ಘೋಷಣೆ ಮಾಡಿತ್ತು ಆದರೆ ಸರಕಾರ ರಚನೆಯಾಗಿ ವರ್ಷಗಳೆ ಕಳೆದರೂ ಮಾದಿಗ ಸಮಾಜಕ್ಕೆ ಒಳಮಿಸಲಾತಿ ಜಾರಿಯಾಗಿಲ್ಲವೆಂದು ಪರಿಶಿಷ್ಟ ಜಾತಿ ಒಳಮಿಸಲಾತಿ ಜಾರಿ ಹೋರಾಟ ಸಮಿತಿ ಸದಸ್ಯ ಶರೀಪ್ ಹರಿಜನ
ಮಾತನಾಡಿದರು.ನಮ್ಮ ಹೋರಾಟ ನಿರಂತರವಾಗಿದ್ದು ಸರಕಾರಗಳು ಬರಿ ಆಶ್ವಾಸನೆಗಳ ಮೂಲಕ ನಮ್ಮ ಸಮಾಜವನ್ನು ಬಳಕೆ ಮಾಡಿಕೊಳ್ಳುತ್ತಿದ್ದು ನಮ್ಮ ಸಮಾಜದ ದೌರ್ಬಲ್ಯವನ್ನು ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕಲಘಟಗಿ ಪಟ್ಟಣದ ವಿಶ್ರಾಂತಿ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ನಮ್ಮ ಸಮಸ್ಯಗಳಿಗೆ ಪರಿಹಾರ ದೊರಕಬೇಕಾದರೇ ಹೋರಾಟ ಮಾತ್ರ ದಾರಿಯಾಗಿದ್ದು ದಿನಾಂಕ ೧೬/೧೦/೨೦೨೪ರ ಬುಧವಾರದಂದು ಧಾರವಾಡದ
ಕಲಾಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆ ಮೂಲಕ ಬೃಹತ್ ಹೋರಾಟ ನಡೆಸಲಾಗುವದು ಎಂದು
ಹೇಳಿದರು. ಈ ಸಂಧರ್ಭದಲ್ಲಿ ಯಲ್ಲಪ್ಪ ಹುಲಮನಿ, ಬಸವರಾಜ ಮಾದರ,ಮಂಜುನಾಥ ಮಾದರ, ಗೋಪಾಲ ದೊಡಮನಿ,ಯಲ್ಲಪ್ಪ ಮೇಲಿನಮನಿ,ಸುರೇಶ ದೊಡ್ಡಮನಿ,ಸೋಮಲಿಂಗ ಮಾದರ ಇದ್ದರು.

ವರದಿ ಶಶಿಕುಮಾರ ಕಟ್ಟಿಮನಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!