Ad imageAd image

ಆಟೋ ಚಾಲಕರ ಸಂಘ ದಿಂದ ಪ್ರತಿಭಟನೆ ಹೋರಾಟ

Bharath Vaibhav
ಆಟೋ ಚಾಲಕರ ಸಂಘ ದಿಂದ ಪ್ರತಿಭಟನೆ ಹೋರಾಟ
WhatsApp Group Join Now
Telegram Group Join Now

ಸಿಂಧನೂರು: ಮಾರ್ಚ್ ೩ ಶಂಕರ ನಾಗ ನಗರ ಮತ್ತು ಗ್ರಾಮೀಣ ಆಟೋ ಚಾಲಕರ ಸಂಘ – ಟಿಯುಸಿಐ ವತಿಯಿಂದ ನಗರಸಭೆ ಮುಂದೆ ಪ್ರತಿಭಟನೆ ಹೋರಾಟ ನಡೆಸಿ ರಾಜ್ಯ ಉಪಾಧ್ಯಕ್ಷ ಟಿಯುಸಿಐ ಎಂ.ಗಂಗಾಧರ್ ಮಾತನಾಡಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಾಲ ಸೋಲ ಮಾಡಿ ಪ್ಯಾಸೆಂಜರ್ ಆಟೋ ತಂದು ನಾವು ದಿನಕ್ಕೆ200 ರಿಂದ 300 ರೂ ಹಣ ಸಂಪಾದನೆ ಮಾಡಿ ಉಳಿಸಿ ನಮ್ಮ ಕುಟುಂಬವನ್ನು ನಿರ್ವಹಿಸಲು ಸಾಕಾಗಿ ಹೋಗಿದೆ ದಿನದಿಂದ ದಿನಕ್ಕೆ ಗಗನಕ್ಕೆ ಎರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು ನಮ್ಮ ಸಣ್ಣ ಕುಟುಂಬಗಳ ಜೀವ ಹಿಂಡುತ್ತಿವೆ ಫೈನಾನ್ಸ್ ನವರು ಕಾಟ ಖಾಸಗಿ ಸಾಲಗಾರರ ಕಿರುಕುಳ ಪೊಲೀಸ್ ದೌರ್ಜನ್ಯ ಹಾಗೂ ಕಿರುಕುಗಳ ಮಧ್ಯ ಮಕ್ಕಳಗಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡುವ ಕನಸುಗಳು ಕನಿಷ್ಠ ಜೀವನ ನಡೆಸುವುದನ್ನು ನಮಗೆ ಕಷ್ಟವಾಗುತ್ತದೆ ಹಾಗಾಗಿ ನಗರದ ಕೇಂದ್ರ ಬಸ್ ನಿಲ್ದಾಣ ಬಸವ ವೃತ್ತ ಗಾಂಧಿವೃತ್ತ ಬಪ್ಪೂರ ರಸ್ತೆ ಜಗಜೀವನ್ ರಾಮ್ ವೃತ್ತ ಕನಕದಾಸ ವೃತ್ತ ವಾಲ್ಮೀಕಿ ಸರ್ಕಲ್ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿ ಆಟೋ ನಿಲ್ದಾಣವನ್ನು ನಿರ್ಮಿಸಬೇಕೆಂದು ನಮ್ಮ ಒತ್ತಾಯವಾಗಿದೆ.

ಹಾಗೆ ಪೊಲೀಸ್ ನವರ ಕಿರುಕುಳ ಮತ್ತು ದಂಡವನ್ನು ತಪ್ಪಿಸಿ ರಸ್ತೆ ಸಂಚಾರಕ್ಕೆ ತೊಂದರೆಯಗದಂತೆ ನೋಡಿಕೊಳ್ಳುವದರೊಂದಿಗೆ ಸುಗಮವಾಗಿ ದುಡಿದುಣ್ಣುವ ಅವಕಾಶ ಕಲ್ಪಿಸಿಕೊಡಬೇಕೆಂದು ನಮ್ಮಯ ವಿನಂತಿ ಎಂದು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ, ಎಂ, ಗಂಗಾಧರ್ ರಾಜ್ಯ ಉಪಾಧ್ಯಕ್ಷರು ಟಿಯು ಸಿಐ, ಎಚ್ ಆರ್ ಹೊಸಮನಿ ಗೌರವಾಧ್ಯಕ್ಷರು, ಹುಲುಗಪ್ಪ ಬಳ್ಳಾರಿ ಅಧ್ಯಕ್ಷರು, ಹನುಮಂತ ಪಕಡದಿನ್ನಿಕ್ಯಾಂಪ್, ಶಂಕ್ರಪ್ಪ ಎಲೆಕೂಡಲಗಿ ಕ್ಯಾಂಪ್ ಉಪಾಧ್ಯಕ್ಷರು, ಇನ್ನಿತರ ಇದ್ದರು.

ವರದಿ:ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!