ಸಿಂಧನೂರು : ಜೂನ್ 14, ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿ ಸಿಂಧನೂರು ವತಿಯಿಂದ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ನಗರದ ಗಂಗಾವತಿ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿವಿಧ ಸಮಸ್ಯೆಗಳನ್ನು ಈಡೇರಿಸದ ಮೇಲ್ವಿಚಾರಕರ ಮೇಲೆ ಕ್ರಮ ಕೈಗೊಳ್ಳುವ ಕುರಿತು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ದಲಿತ ಪರಿಷತ್ ತಾಲೂಕ ಘಟಕ ಅಧ್ಯಕ್ಷ ದುರುಗೇಶ್ ಕಲ್ಮಂಗಿ ತಿಳಿಸಿದರು.
ಸರ್ಕಾರವು ವಿದ್ಯಾರ್ಥಿ ಯುವಜನರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು ಅದರಿಂದ ಶಿಕ್ಷಣಕ್ಕೆ ಹಾಗೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಿರುವುದು ಒಂದೆಡೆ ಆದರೆ ಇದರಿಂದ ಈ ಯೋಜನೆಗಳನ್ನು ದುರುಪಯೋಗ ಪಡಿಸಿಕೊಳ್ಳುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿರುವುದು ವಿಪರ್ಯಾಸವೇ ಈ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳಾದ ಕುಡಿಯುವ ನೀರಿನ ವ್ಯವಸ್ಥೆ ಅಡಿಗೆ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಬರದೆ ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದ್ದು ಮತ್ತು ಶೌಚಾಲಯದ ಸಮಸ್ಯೆ ನೀರಿನ ಟ್ಯಾಂಕರ್ ಗಳು ಸ್ವಚ್ಛತೆ ಇಲ್ಲದೆ ವಿದ್ಯಾರ್ಥಿಗಳಿಗೆ ಕಾಯಿಲೆ ಬಂದಿರುವ ಉದಾಹರಣೆ ಇವೆ ಕೊಠಡಿಗಳಲ್ಲಿ ಸರಿಯಾದ ಫ್ಯಾನ್ ವ್ಯವಸ್ಥೆ ಮತ್ತು ವಿದ್ಯುತ್ ದ್ವೀಪಗಳ ವ್ಯವಸ್ಥೆ ಇರುವುದಿಲ್ಲ.
ಶೌಚಾಲಯ ಮತ್ತು ಸ್ನಾನದ ಕೋಣೆಯ ಬಾಗಿಲುಗಳಿಗೆ ಚಿಲಕವೇ ಇಲ್ಲ, ವಸತಿ ನಿಲಯದಲ್ಲಿ ಸ್ನಾನ ಮಾಡಲು ಬಕೆಟ್ ಗಳ ವ್ಯವಸ್ಥೆ ಇಲ್ಲ, ಗುಣಮಟ್ಟದ ಆಹಾರವು ವಿತರಣೆಯಾಗುತ್ತಿಲ್ಲ ಗ್ರಂಥಾಲಯ ಪೇಪರ್ ಮತ್ತು ಸ್ಪರ್ಧಾತ್ಮಕ ಮಾಸ ಪತ್ರಿಕೆಗಳು ವಿತರಣೆ ಆಗುತ್ತಿಲ್ಲ ಹೀಗೆ ಸಾಲು-ಸಾಲು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದು ಇದಕ್ಕೆ ಸಂಬಂಧಪಟ್ಟ ಮೇಲ್ವಿಚಾರಕರು ಮತ್ತು ಸಮಾಜ ಕಲ್ಯಾಣ ಇಲಾಖೆಯ ತಾಲೂಕ ಸಹಾಯಕ ನಿರ್ದೇಶಕರು ದಿವ್ಯ ನಿರ್ಲಕ್ಷ ವಹಿಸಿದ್ದು ಇವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿ ಸಿಂಧನೂರ ವತಿಯಿಂದ ವಸತಿ ನಿಲಯದ ವಿದ್ಯಾರ್ಥಿಗಳ ಸಹಯೋಗದೊಂದಿಗೆ ತಾಲೂಕ ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದುರುಗೇಶ ಕಲ್ಮಂಗಿ ತಾಲೂಕ ಅಧ್ಯಕ್ಷರು, ನರಸಪ್ಪ ಬಡಿಗೇರ್. ಶರಣಬಸವ ಕಲಮಂಗಿ, ದುರ್ಗೇಶ ರೌಡಕುಂದ, ವಸತಿ ನಿಲಯದ ವಿದ್ಯಾರ್ಥಿಗಳಾದ, ಶಿವರಾಜ, ಹನುಮೇಶ, ವೀರೇಶ,ದೇವರಾಜ್,ಆಕಾಶ,ಮರೀಶ್,ಅಜಯ, ನ, ಪ್ರಭುಲಿಂಗ,ಆಂಜನೇಯ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ