ಚಿಂಚೋಳಿ:-ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ತಹಸಿಲ್ದಾರ್ ಕಚೇರಿ ಎದುರುಗಡೆ ತಾಲೂಕು ವೀರಶೈವ ಲಿಂಗಾಯತ ಸಮಾಜ ಹಾಗು ಸಿದ್ದಗಂಗಾ ಶ್ರೀಗಳ ಅಭಿಮಾನಿ ಬಳಗದ ವತಿಯಿಂದ ಬೆಂಗಳೂರಿನ ವೀರಭದ್ರ ನಗರದ ಬಸ್ ನಿಲ್ದಾಣ ಬಳಿ ಪ್ರತಿಷ್ಠಾಪಿಸಿರುವ ಸಿದ್ದಗಂಗಾ ಶ್ರೀಗಳಾದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ವಿರೂಪ ಗೊಳಿಸಿದ್ದ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ಮಾಡಿ ತಹಸಿಲ್ದಾರ್ ಮುಖಾಂತರ ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ತಾಲೂಕ ವೀರಶೈವ ಸಮಾಜದ ಮತ್ತು ಸಿದ್ದಗಂಗಾ ಶ್ರೀಗಳ ಅಭಿಮಾನಿ ಬಳಗ ವತಿಯಿಂದ ತಹಶೀಲ್ದಾರ್ ಕಾರ್ಯಾಲಯದಲ್ಲಿ
ಚಿಂಚೋಳಿ ತಾಲೂಕ ವೀರಶೈವ ಲಿಂಗಾಯತ ಸಮಾಜ ತಾಲೂಕ ಅಧ್ಯಕ್ಷರಾದ ಸಂಜೀವ್ ಕುಮಾರ್ ಪಾಟೀಲ್, ಅವರು ಮಾತನಾಡಿ ತುಮಕೂರು ಸಿದ್ದಗಂಗಾ ಮಠದ ಹಿಂದಿನ ಪೀಠಾಧಿಪತಿ ಲಿoಗೈಕ್ಯ ಶಿವಕುಮಾರ ಶ್ರೀಗಳು ಯಾವುದೇ ಜಾತಿ, ಧರ್ಮ ಎನ್ನದೇ ಸರ್ವರಿಗೂ ಭಕ್ತಾದಿಗಳಿಗೆ ದಾಸೋಹ ಗೈದು ನಾಡಿನಲ್ಲಿ ನಡೆದಾಡುವ ದೇವರು ಎಂದು ಕರೆಯಲ್ಪಡುತ್ತಿದ್ದರು.
ಸ್ವಾಮೀಜಿಯವರ ಪುತ್ಥಳಿ ವಿರೂಪಗೊಳಿಸಿರುವುದು ದುರದೃಷ್ಟಕರ ಹಾಗೂ ಅಘಾತಕಾರಿ ಘಟನೆ, ಶಾಂತಿ, ಕರುಣಿ ಮತ್ತು ಜಾತ್ಯತೀತ ಮೌಲ್ಯಗಳ ಸಂಕೇತವಾಗಿ ಪೂಜಿಸಲ್ಪಟ್ಟ ಸ್ವಾಮೀಜಿ, ಅಸಂಖ್ಯಾತ ಜನರಿಗೆ ಸ್ಫೂರ್ತಿಯಾಗಿದ್ದರು ಇಂತಹ ಮಹಾನ್ ಚೇತನರ ಪುತ್ಥಳಿ ವಿರೂಪಗೊಆಸಿದ್ದ ಅರೋಪಿಗೆ ಕಠಿಣ ಕಾನೂನು ಕ್ರಮ ಜರುಣಸಬೇಕು ಹಾಗೂ ರಾಜ್ಯದಲ್ಲಿ
ಇಂತಹ ಘಟನೆಗಳು ಮರು ಆಗದಂತೆ ಕರ್ನಾಟಕ ರಾಜ್ಯದ ಎಲ್ಲಾ ಮಹಾ ಪರುಷರ ಪ್ರತಿಮೆ ಹತ್ತಿರ ರಾಜ್ಯಸರಕಾರದ
ವತಿಯಿಂದ ಸಿ.ಸಿ.ಕ್ಯಾಮರಾ ಅಳವಡಿಸಬೇಕೆಂದು ಬೇಕೆಂದು ಹೇಳಿದರು ಈ ಸಂದರ್ಭದಲ್ಲಿ ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ವೀರೇಶ್ ದೇಸಾಯಿ, ಸಿದ್ದಗಂಗಾ ಶ್ರೀಗಳ ಅಭಿಮಾನಿಗಳಾದ ದಯಾನಂದ ಹಿತ್ತಲ,ಬಸಯ್ಯಸ್ವಾಮಿ, ಮಡಿವಾಳಯ್ಯ ಸ್ವಾಮಿ,ಶ್ರೀಮಂತ ಕಟ್ಟಿಮನಿ, ಮಾರುತಿ ಗಂಜಗೀರಿ,ಅಮರ್ ಲೋಡ್ಡನೋರ್, ಕಾಶಿರಾಮ ದೇಗುಲಮಡಿ, ರಾಜು ಯಲಕಪಳ್ಳಿ, ಶ್ರೀಕಾಂತ್ ಜಾನಕಿ,ವಿಜಯರಾಜ್ ಕೊರಡಂಪಳ್ಳಿ.ಜಗನ್ನಾಥ ಪೂಜಾರಿ,ಸಾಗರ್, ಓಮನರಾವ ಕೊರವಿ,ಮನವರ ಕೊರವಿ, ಮತ್ತು ಅನೇಕ ಸಿದ್ದಗಂಗಾ ಶ್ರೀಗಳ ಅಭಿಮಾನಿಗಳು ಇದ್ದರು
ವರದಿ :-ಸುನಿಲ್ ಸಲಗರ