ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಬಳಿಯ ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಕೆಲವು ಕಿಡಿಗೇಡಿಗಳು ಅವಮಾನ ಮಾಡಿರುವ ಘಟನೆಯನ್ನು ಖಂಡಿಸಿ ಚಿಂಚೋಳಿ ತಾಲೂಕ ವೀರಶೈವ ಲಿಂಗಾಯತ ಸಮಾಜ ವತಿಯಿಂದ ತಹಸೀಲ್ ಕಾರ್ಯಾಲಯ ಅವರಣದಲ್ಲಿ ಪ್ರತಿಭಟನೆ ಮಾಡಿ ತಹಶೀಲ್ದಾರ್ ಮುಖಾಂತರ ರಾಜ್ಯ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ತಾಲೂಕಾ ವೀರಶೈವ ಸಮಾಜದ ಅಧ್ಯಕ್ಷರಾದ ಸಂಜೀವ್ ಕುಮಾರ ಪಾಟೀಲ್,ಅವರು ಮಾತನಾಡಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಬಳಿಯ ವಿಶ್ವಗುರು ಬಸವಣ್ಣ ಅವರ ಪ್ರತಿಮೆಗೆ ಅವಮಾನ ಮಾಡಿದ್ದು ತಾಲೂಕ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಖಂಡಿಸುತ್ತೇವೆ ಇದೇ ತರ ಘಟನೆ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಿದ್ದಗಂಗಾ ಶ್ರೀಗಳ ಪ್ರತಿಮೆಗೆ ಎಲ್ಲಾ ಕೆಡಿಗೇಡಿಗಳು ದಂಸ ಮಾಡಿದ್ದರು.
ಆ ಸುದ್ದಿ ತಿಳಿದು ಚಿಂಚೋಳಿ ತಾಲೂಕು ವೀರಶೈವ ಸಮಾಜದಿಂದ ಪ್ರತಿಭಟನೆ ಮಾಡಿ ಸರ್ಕಾರ ವತಿಯಿಂದ ಎಲ್ಲಾ ಮಹಾಪುರುಷರ ಪ್ರತಿಮೆ ಹತ್ತಿರ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಒತ್ತಾಯಿಸಿದ್ದೇವೆ ಆದರೂ ಕೂಡ ಇನ್ನೊಬರಿಗೆ ರಾಜ್ಯ ಸರ್ಕಾರವು ಸಿ ಸಿ ಕ್ಯಾಮೆರಾವನ್ನು ಅಳವಡಿಸಿಲ್ಲ ಇದೆಲ್ಲ ನೋಡಿದರೆ ರಾಜ್ಯ ಸರ್ಕಾರವು ಮತ್ತು ಕೆಲ ಅಧಿಕಾರಿಗಳ ನಿರ್ಲಕ್ಷದಿಂದಲೇ ಇಂಥ ಘಟನೆಗಳು ಮರು ಆಗುತ್ತಿದ್ದು ಕೂಡಲೇ ರಾಜ್ಯದಲ್ಲಿ ಎಲ್ಲಾ ಮಹಾಪುರುಷರ ಪ್ರತಿಮೆ ಹತ್ತಿರ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲೂಕ ವೀರಶೈವ ಲಿಂಗಾಯತ ಸಮಾಜದ ಗೌರವಾಧ್ಯಕ್ಷರಾದ ರಮೇಶ ಪಡಶೆಟ್ಟಿ,ತಾಲೂಕ ಖಜಂಚಿ ಗಳಗ ರವೀಂದ್ರ ಬಂಡೆಪ್ಪನೋರ,ತಾಲೂಕ ಯುವ ಅಧ್ಯಕ್ಷರಾದ ಪವನ ಪಾಟೀಲ್,ಸಮಾಜದ ಮುಖಂಡರಾದ ಬಸವರಾಜ ದೇಶಮುಖ ಗಾರಂಪಳ್ಳಿ,ವಿವೇಕ್ ಪಾಟೀಲ್, ರೇವಣಸಿದ್ಧ ಮೊಘ,ವಿಶ್ವನಾಥ ರೆಡ್ಡಿ,ಮಂಜುನಾಥ ಲೇವಡಿ,ಸಂತೋಷ್ ಕೊಂಡ,ಗುಂಡಾ ರೆಡ್ಡಿ, ರಾಕೇಶ್ ದೇಸಾಯಿ,ಸಂತೋಷ್ ಚಿಟ್ಟ, ಮಲ್ಲು ಸುನಗಲ ಮಠ,ಶಾಂತಯ್ಯಸ್ವಾಮಿ,ಬಸವಅಭಿಮಾನಿಗಳಾದ ಗೋಪಾಲ ಗಾರಂಪಳ್ಳಿ,ಅಂಜಪ್ಪ ಪೂಜಾರಿ ಕಲ್ಲೂರು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ವರದಿ : ಸುನಿಲ್ ಸಲಗರ