ಕಲಬುರಗಿ : ಕಲಬುರಗಿ ಪಟ್ಟಣದಲ್ಲಿ ಪರಿಶಿಷ್ಠ ಜಾತಿಗಳ ಒಳ ಮೀಸಲಾತಿಯನ್ನು ಶೇಕಡ 6:6:5 ಅನುಪಾತದ ಅನುಸಾರವಾಗಿ ಸಂಪೂರ್ಣವ ಜಾರಿಗೊಳಿಸಲು ಮುಂಬರುವ ಬಜೆಟ್ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ. ಪ್ರಿಯಾಂಕ್ ಖರ್ಗೆಜಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಕರ್ನಾಟಕ ಸರ್ಕಾರ, ಸರ್ವೋಚ್ಛ ನ್ಯಾಯಾಲಯದ ಐತಿಹಾಸಿಕ ತೀರ್ಪಿನ ಆಧಾರದ ಮೇಲೆ ರಾಜ್ಯ ಸರ್ಕಾರ ಪರಮಾಧಿಕಾರವನ್ನು ಚಲಾಯಿಸಿ ಇದುವರೆಗೂ ನೊಂದ ಸಮುದಾಯಗಳು ನಡೆಸಿಕೊಂಡು ಬಂದಿರುವ ಅವಿಶ್ರಾಂತ ಸಂಘರ್ಷಕ್ಕೆ ಇತಿ ಹಾಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ.
ಅದರಲ್ಲೂ ಸಂವಿಧಾನ ಪರ, ಸಾಮಾಜಿಕ ನ್ಯಾಯ ಪರ, ಸಮಾಜವಾದ ಸಿದ್ಧಾಂತ ಹಿನ್ನೆಲೆಯ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರವು ಒಳ ಮೀಸಲಾತಿ ವಿಚಾರದಲ್ಲಿ ಅಸ್ಪಷ್ಠ ತೀರ್ಮಾನ ಕೈಕೊಳ್ಳ ಬಹುದೆಂದು ಯಾರೂ ಭಾವಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ದಲಿತರಲ್ಲಿಯೇ ಅವಕಾಶ ವಂಚಿತ ಸಮುದಾಯಗಳು ಮತ್ತೊಂದು ಸುತ್ತಿನ ಸಂಘಷ ಮುಂದಾಗಲು ಆಡಳಿತರೂಢ ಸರ್ಕಾರವೇ ಅವಕಾಶ ಕಲ್ಪಿಸಿದಂತಾಗಿದೆ.
ಒಳ ಮೀಸಲಾತಿ ಕಲ್ಪಿಸುವುದಕ್ಕೆ ಕೇವಲ ಜನ ಸಂಖ್ಯೆ ಮಾನದಂಡವಾಗಿರದೆ, ಸಾಮಾಜಿಕ,ಶೈಕ್ಷಣಿಕ,ಔದ್ಯೋಗಿಕ ಆ
ಹಾಗೂ ರಾಜಕೀಯ ಹಿಂದುಳಿದಿರುವಿಕೆ ಮತ್ತು ಅಸಮರ್ಪಕ ಪ್ರಾತಿನಿಧ್ಯ ಮಾನದಂಡವಾಗಿರಬೇಕೆನ್ನುವುದು ಮಾನ್ಯ ಸವೊ
ನ್ಯಾಯಾಲಯದ ಐತಿಹಾಸಿಕ ತೀರ್ಪಿನ ಆಶಯವಾಗಿರುತ್ತದೆ. ಹಾಗಾಗಿಯೇ ಹರಿಯಾಣ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ ಕೇವಲ ಮೂರು ತಿಂಗಳಾಗುವುದರಲ್ಲಿಯೇ ನಿಖರವಾದ ದತ್ತಾಂಶಗಳನ್ನು ಪಡೆದು,ಅನೇಕ ವರ್ಷಗಳೆಂದು. ಅಸಂಖ್ಯಾತ ಸರ್ಕಾರಿ ಹುದ್ದೆಯ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ.ಅದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಯಾವೊಂದೂ ಮಾರ್ಗಸೂಚಿಗಳನ್ನು ಅನುಸರಿಸದೆ, ನಿಖರ ದತಾಂಶಗಳನ್ನು ಗಂಭೀರವಾ
ಪರಿಗಣಿಸದೆ ಕಾನೂನಿನ ಇಕ್ಕಟ್ಟಿಗೆ ಸಿಲುಕಿಸಿ, ನೇಮಕಾತಿ ಆಗಬಹುದಾದ ಲಕ್ಷಾಂತರ ನಿರುದ್ಯೋಗಿ ಯುವಜನತೆಯ ಗುರಿಯಾಗಿರುವುದು, ಯಾರ ಪ್ರಭಾವಕ್ಕೆ ಮಣಿದು ಇಂತಹ ಕೆಟ್ಟ ತೀರ್ಮಾನಗಳನ್ನು ತೆಗೆದುಕೊಂಡಿದ್ದು ಎನ್ನುವುದು ತಮಗೆ ಗೊತ್ತಿರುವ ಸಂಗತಿಯೆನಲ್ಲ.
ಆದ್ದರಿಂದ, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆ ಉಸ್ತುವಾರಿ ಸಚಿವರ ಕಛೇರಿಯ ಎದುರುಗಡೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಕರ್ನಾಟಕ ಮಾದರ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಗೊಪಾಲರಾವ ಕಟ್ಟಿಮನಿಯವರು ತಿಳಿಸಿದ್ದಾರೆ.
ವರದಿ : ಸುನಿಲ್ ಸಲಗರ




