ಸಿಂಧನೂರು : -ತಾಲೂಕಿನ ಜವಳಗೇರಾ ಗ್ರಾಮದ ಸರ್ವೆ ನಂ 419 ಹಾಗೂ 186 ರಾಜಶೇಖರ ನಾಡಗೌಡರ ಹೆಚ್ಚುವರಿ ಭೂಮಿಯನ್ನು ಭೂ ರಹಿತರಿಗೆ ವಿತರಿಸಲು ಆಗ್ರಹಿಸಿ ಸಿಪಿಐ(ಎಂಎಲ್) ಕರ್ನಾಟಕ ರೈತ ಸಂಘ ಜಂಟಿ ಸಂಘಟನೆಗಳಿಂದ ನಗರದ ತಹಸಿಲ್ದಾರ್ ಕಛೇರಿ ಮುಂದೆ ಧರಣಿ ಪ್ರತಿಭಟನೆ ಮಾಡಿ ಸಿದ್ದಲಿಂಗಮ್ಮ ವೆಂಕಟರಾವ್ ನಿಧನರಾಗಿದ್ದು ಇವರಿಗೆ ಸಂಬಂಧವಿಲ್ಲದ ನಾಡಗೌಡರು ತಮ್ಮ ಅಪ್ರಾಪ್ತ ಹೆಣ್ಣುಮಕ್ಕಳ ಹೆಸರಿನಲ್ಲಿ ಸಿದ್ದಲಿಂಗಮ್ಮಳ ಕೆಲವು ಜಮೀನುಗಳನ್ನು ವರ್ಗಾಯಿಸಿಕೊಂಡಿದ್ದು ಕಾನೂನು ಬಾಹಿರವಾಗಿದೆ .
ಈ ಭೂಮಿ ಪ್ರಕರಣ ಮರು ವಿಚಾರಣೆ ಮುಂದಿನ ಭೂ ನ್ಯಾಯ ಮಂಡಳಿಯಲ್ಲಿ ಕೈಗೆತ್ತಿಕೊಂಡು ಜವಳಗೇರಾ ಗ್ರಾಮದ ಸರ್ವೆ ನಂಬರ್ 419 ಹಾಗೂ 186 ಜಮೀನಿನ ಕಬ್ಜದಿಂದ ನಕಲಿ ವಾರಸುದಾರಾದ ರಾಜಶೇಖರ ನಾಡಗೌಡ ಮತ್ತಿತರನ್ನು ಹೊರಹಾಕಿ ಭೂ ರಹಿತ ಕೃಷಿ ಕಾರ್ಮಿಕರು ಸಲ್ಲಿಸಿದ ಅರ್ಜಿಗಳು ಕಳೆದ ಆರು ತಿಂಗಳಿಂದ ತಮ್ಮ ಮುಂದೆ ಇವೆ ಈ ಹೆಚ್ಚುವರಿ ಭೂಮಿಯನ್ನು ಭೂ ರಹಿತರಿಗೆ ವಿತರಿಸಲು ಪ್ರತಿಭಟನಾಕಾರರು ಆಗ್ರಹಿಸಿ ಮಾನ್ಯ ಡಿ ವೈಎಸ್ಪಿ ಬಿ ಎಸ್. ತಳವಾರ್. ಪಿ ಐ. ದುರ್ಗಪ್ಪ ಇವರ ಉಪಸ್ಥಿತಿಯಲ್ಲಿ ಮಾನ್ಯ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ – ಕೆ.ಆರ್.ಎಸ್ ರಾಜ್ಯಾಧ್ಯಕ್ಷ. ಕಂದಗಲ್ ಶ್ರೀನಿವಾಸ್, ಸಿಪಿಐ(ಎಂಎಲ್) ರೆಡ್ ಸ್ಟಾರ್. ರಾಜ್ಯ ಸಮಿತಿ ಸದಸ್ಯ. ಎಂ ಗಂಗಾಧರ,
ಕೆ ಆರ್ ಎಸ್ ಜಿಲ್ಲಾಧ್ಯಕ್ಷ. ಮಲ್ಲಯ್ಯ ಕಟ್ಟಿಮನಿ, ಉಪಾಧ್ಯಕ್ಷ ಸಂತೋಷ್ ಹಿರೇದಿನ್ನಿ, ಸುಧಾ. ರತ್ನಮ್ಮ. ರುಕ್ಮಿಣಿಮ್ಮ. ಅಂಬಮ್ಮ. ರೇಣುಕಮ್ಮ. ಮಲ್ಲಮ್ಮ. ಹಂಪಮ್ಮ ಯಮನಮ್ಮ. ಕಮಲಮ್ಮ. ಸಂಗಮ್ಮ. ಚೈತ್ರ. ಶ್ರೀದೇವಿ. ಜುಬೇದ ಬೇಗಂ. ಇನ್ನಿತರರು ಇದ್ದರು
ವರದಿ:-ಬಸವರಾಜ ಬುಕ್ಕನಹಟ್ಟಿ