ಬೆಳಗಾವಿ:- ನೇಹಾ ಹಿರೇಮಠ ಳನ್ನು ಹತ್ಯೆ ಗೈದ ಫಯಾಜ್ ನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೆಕೆಂದು ಆಗ್ರಹಿಸಿ ಜಂಗಮ ಸಂಘಟನೆ ಪಧಾದಿಕಾರಿಗಳು ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ದೇಶದಲ್ಲಿ ಹಿಂದುಗಳ ಜನತೆ ಮೇಲೆ ದಬ್ಬಾಳಿಕೆ, ಕೊಲೆ, ಮಹಿಳೆಯರ ಮೇಲೆ ಅತ್ಯಾಚಾರಗಳು ಹೆಚ್ಚುತ್ತಿವೆ. ರಾಜ್ಯ ಸರ್ಕಾರ ಹಿಂದು ವಿರೋಧಿ ಸರ್ಕಾರ ವಿದ್ದು ಯಾವುದೇ ಭದ್ರತೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ.
ಹುಬ್ಬಳ್ಳಿಯ ಕಾಲೇಜು ಒಂದರಲ್ಲಿ ನೇಹಾ ಎಂಬ ಯುವತಿಯನ್ನು ಚಾಕುವಿನಿಮದ ಇರಿದು ಹತ್ಯೆಗೈದ ಫಯಾಜ ನನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು. ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೆಕು. ಎಂದು ಎಚ್ಚರಿಸುತ್ತಿದ್ದೆವೆ ಎಂದರು.
ಪ್ರತಿಭಟನೆಯಲ್ಲಿ ಮಹಾಂತೇಶ ವಕುಂದ್, ಚಂದ್ರಶೇಖರ ಸಾಲಿಮಠ, ಶಂಕರಯ್ಯ ಹಿರೇಮಠ, ಮುರುಗೇಂದ್ರ ಹಿರೇಮಠ, ಶಂಕರ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು
ವರದಿ:ಪ್ರತೀಕ ಚಿಟಗಿ