Ad imageAd image

ರೈತರಗೆ ಭೂ ಸಾಗುವಳಿ ಹಕ್ಕು ಪತ್ರ ಕೊಡಬೇಕೆಂದು ಪ್ರತಿಭಟನೆ

Bharath Vaibhav
ರೈತರಗೆ ಭೂ ಸಾಗುವಳಿ ಹಕ್ಕು ಪತ್ರ ಕೊಡಬೇಕೆಂದು ಪ್ರತಿಭಟನೆ
WhatsApp Group Join Now
Telegram Group Join Now

ರಾಮದುರ್ಗ: ತಾಲೂಕಿನಲ್ಲಿ ರೈತರು 50 ರಿಂದ 60 ವರ್ಷಗಳಿಂದ ಭೂ ಸಾಗುವಳಿ ಮಾಡುತ್ತಾ ಬಂದಿರುತ್ತಾರೆ ಆದರೆ ನಮ್ಮ ಕರ್ನಾಟಕ ಸರ್ಕಾರ ಯಾವುದೇ ಭೂ ಸಾಗುವಳಿ ಹಕ್ಕು ಪತ್ರ ಇಲ್ಲಿಯವರೆಗೂ ನೀಡಿರುವುದಿಲ್ಲ ಎಂದು ಉತ್ತರ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಸವರಾಜ ಕರಿಗಾರ ಅವರು ಪ್ರತಿಭಟನೆ ಮೂಲಕ ಮಾನ್ಯ ತಹಶೀಲ್ದಾರ ರಾಮದುರ್ಗ ಇವರಿಗೆ ಮನವಿಯನ್ನು ಸಲ್ಲಿಸಿದರು.

ಅದೇ ದಕ್ಷಿಣ ಕರ್ನಾಟಕದಲ್ಲಿ ಕಂದಾಯ ಸಚಿವ ಕಾಗೋಡ ತಿಮ್ಮಪ್ಪನವರು ಇದ್ದಾಗ ದಕ್ಷಿಣ ಕರ್ನಾಟಕದಲ್ಲಿ ಭೂ ಸಾಗುವಳಿ ಹಕ್ಕು ಪತ್ರ ಹಾಗೂ ಬಗರ ಹುಕುಂ ಹಕ್ಕು ಪತ್ರ ಎಲ್ಲರಿಗೂ ನೀಡಿದ್ದರು.

ನಮ್ಮ ಉತ್ತರ ಕರ್ನಾಟಕದ ರೈತರಿಗೆ ಇಲ್ಲಿಯವರೆಗೂ ನ್ಯಾಯ ಸಿಕ್ಕಿರುವುದಿಲ್ಲ ತಾವು ಶೀಘ್ರವಾಗಿ ಕಮಿಟಿಯನ್ನು ರಚನೆ ಮಾಡಿ ಎಲ್ಲರಿಗೂ ಭೂ ಸ್ವಾದಿನ ಹಕ್ಕು ಪತ್ರ ಒಂದು ತಿಂಗಳ ಒಳಗಾಗಿ ನೀಡುಬೇಕು ಒಂದು ವೇಳೆ ಹಕ್ಕು ಪತ್ರ ನೀಡದಿದ್ದರೆ ತಾಲೂಕ ಆಡಳಿತ ವಿರುದ್ಧ ಉಗ್ರ ಹೋರಾಟ ನಡೆಸುತ್ತೇವೆ ಎಂದು ಮಾತನಾಡಿದ ಉತ್ತರ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಸವರಾಜ ಕರಿಗಾರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ರೈತ ಸಂಘದ ಮುಖಂಡರಾದ ಅಬ್ದುಲ್ ಯಾದವಾಡ, ಮತ್ತು ಸಂಘದ ಕಾರ್ಯಕರ್ತರು ಹಾಗೂ ರೈತರು ಈ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ಮಂಜುನಾಥ ಕಲಾದಗಿ

WhatsApp Group Join Now
Telegram Group Join Now
Share This Article
error: Content is protected !!