Ad imageAd image

ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನ

Bharath Vaibhav
ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನ
WhatsApp Group Join Now
Telegram Group Join Now

ಮೂಲ ಸೌಕರ್ಯಗಳನ್ನು ಒದಗಿಸಿ ಎಂದು ಪ್ರತಿಭಟನೆ

ಬಳ್ಳಾರಿ :ನಾಗರಿಕ ಹೋರಾಟ ಸಮಿತಿ(BNHS)ಯಿಂದ, ನಾಗರಿಕರಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ, ಇದೇ ತಿಂಗಳು 27 ರಂದು ನಡೆಯುತ್ತಿರುವ ಜನತೆಯ ಸಮಾವೇಶದ ಹಿನ್ನೆಲೆಯಲ್ಲಿ.

ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದಕ್ಕೆ ಪೂರಕವಾಗಿ ಇಂದು ಬಳ್ಳಾರಿ ನಗರದ ಮೋತಿ ಸರ್ಕಲ್ ನಲ್ಲಿ, ನಾಗರಿಕರಿಂದ ಸಹಿ ಸಂಗ್ರಹ ಕಾರ್ಯಕ್ರಮ ನಡೆಯಿತು. ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸಂಚಾಲಕರಾದ ಶ್ರೀಯುತ ಸೋಮಶೇಖರ್ ಗೌಡ ಚಾಲನೆ ನೀಡಿದರು.

ನಂತರ ಮಾತನಾಡಿದ ಬಳ್ಳಾರಿ ನಗರದ ಪರಿಸ್ಥಿತಿ ದಿನ ದಿನಕ್ಕೆ ಹದಗಳುತ್ತಿದೆ, ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಿತವಾಗಿ ಸರಬರಾಜಾಗುತ್ತಿದೆ, ಚರಂಡಿ ನೀರು ಬೆರೆಯದಂತೆ ಕ್ರಮ ಕೈಗೊಳ್ಳಿ, ಸುಧಾ ಕ್ರಾಸ್ ರೈಲ್ವೇ ಮೇಲ್ ಸೇತುವೆ ಪೂರ್ಣಗೊಳಿಸಿ.

ಬೆಂಗಳೂರು ರಸ್ತೆ ಬೈಪಾಸ್ ಹತ್ತಿರ ಟ್ರಾಫಿಕ್ ಸಮಸ್ಯೆ ಪರಿಹರಿಸಿ, ನಗರದಲ್ಲಿ ಅನಾವಶ್ಯಕ ಯಾರು ಬೇಡದ ದುಂದು ವೆಚ್ಚ ಮಾಡಿ ಅವೈಜ್ಞಾನಿಕ ಸರ್ಕಲಗಳ ನಿರ್ಮಾಣ ಬೇಡ, ಬದಲಾಗಿ ಆದ್ಯತೆ ಮೇರೆಗೆ ಕೆಟ್ಟು ಹಾಳಾಗಿರುವ ರಸ್ತೆಗಳ ನಿರ್ಮಾಣ ಮಾಡಿ, ಹಾಳಾಗಿರುವ ಒಳ ರಸ್ತೆಗಳ ನಿರ್ಮಾಣ ರಸ್ತೆ ಬದಿಗಳಲ್ಲಿ ಮಳೆ ನೀರು ಸುಗಮವಾಗಿ ಹರಿಯಲು ಹೊರ ಚರಂಡಿ ನಿರ್ಮಾಣ ಸೇರಿದಂತೆ ಜನ ಬಯಸುವ ಕೆಲಸಗಳನ್ನು ಆದ್ಯತೆ ನೀಡಬೇಕಾಗಿದೆ.

ಇದೇ ತಿಂಗಳು 27ರಂದು ಬೃಹತ್ ಜನತೆಯಸಮಾವೇಶ ಗಾಂಧಿ ಭವನದಲ್ಲಿ 11:00 ಗಂಟೆಗೆ ನಡೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಬಂದು ಭಾಗವಹಿಸಬೇಕೆಂದು ಕರೆಯಿತ್ತರು.

ಇದೇ ವೇಳೆ ವಿಶ್ರಾಂತ್ ಉಪನ್ಯಾಸಕರಾದ ಶ್ರೀ ನರಸಣ್ಣರವರು, ಶ್ರೀ ಪ್ರಸಾದ್, ಗೋವಿಂದ್, ಶಾಂತ, ರಾಜ,ನಾಗರತ್ನ ಎಸ್ ಜಿ, ಚಂದ್ರಶೇಖರ್, ಅಂತೋನಿ, ಈಶ್ವರಿ ವಿಜಯಲಕ್ಷ್ಮಿ, ವಿದ್ಯಾವತಿ ಇನ್ನು ಹಲವಾರು ಸದಸ್ಯರು ಭಾಗವಹಿಸಿದ್ದರು.

ವರದಿ: ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!