Ad imageAd image

ಅಕ್ರಮ ಜಾಗೆ ಸಕ್ರಮಗೊಳೊಸಲು ಒತ್ತಾಯಿಸಿ ನಾಳೆ ಪ್ರತಿಭಟನೆ

Bharath Vaibhav
ಅಕ್ರಮ ಜಾಗೆ ಸಕ್ರಮಗೊಳೊಸಲು   ಒತ್ತಾಯಿಸಿ ನಾಳೆ  ಪ್ರತಿಭಟನೆ
WhatsApp Group Join Now
Telegram Group Join Now

ಅಥಣಿ: ಬೆಳಗಾವಿ ಜಿಲ್ಲೆಯಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಬಡ, ದಲಿತ,ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಕುಟುಂಬಗಳಿಗೆ ಬಗರ್ ಹುಕುಂ ಯೋಜನೆಯಡಿ ಸರ್ಕಾರಿ ಗಾಯರಣ ಜಾಗೆಯನ್ನು ಸಕ್ರಮಗೊಳಿಸಲು, ಹಾಗೂ ಸಾಗುವಳಿ ಚೀಟಿ ನೀಡಲು ಆಗ್ರಹಿಸಿ ಭೀಮವಾದ ದಲಿತ ಸಂಘರ್ಷ ಸಮಿತಿ (ರಿ) ವತಿಯಿಂದ ಗುರುವಾರ ದಿನಾಂಕ 12-12-2024 ರಂದು ಮುಂಜಾನೆ 10-30 ಗಂಟೆಗೆ ಬೆಳಗಾವಿಯ ಸುವರ್ಣ ಸೌಧದ ಮುಂದೆ ಸುವರ್ಣ ಗಾರ್ಡನ್ ಟೆಂಟ್ ನಂ 3 ರಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ
ಈ ಪ್ರತಿಭಟನಾ ಧರಣಿಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮುಖಂಡರು ಹಾಗೂ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಬೇಕು ಹಾಗೂ
ತಮ್ಮ ತಾಲೂಕು ಅಥವಾ ಗ್ರಾಮದ ಬಗರ್ ಹುಕುಂ ಸಾಗುವಳಿ ಯಾರದಾದರೂ ಇದ್ದರೆ ರಾಜ್ಯ ಸಮಿತಿ ಸದಸ್ಯರಾದ ಕೆಂಪಣ್ಣ ಶಿರಹಟ್ಟಿ 99007 84471 ಇವರನ್ನು ಸಂಪರ್ಕಿಸಿ ಮನವಿ ಪತ್ರದಲ್ಲಿ ಸೇರಿಸಲು ಅನುಕೂಲವಾಗುತ್ತದೆ ಎಂದು
ಸಂಜೀವ ಕಾಂಬಳೆ ರಾಜ್ಯ ಸಂಘಟನಾ ಸಂಚಾಲಕರು
ಭೀಮವಾದ ದಲಿತ ಸಂಘರ್ಷ ಸಮಿತಿ (ರಿ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!