ಸಿಂಧನೂರು : ಏಪ್ರಿಲ್ 11 ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರ ವರುಣಾಸಿಯಲ್ಲಿ 12ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ 19 ವರ್ಷದ ಬಾಲಕಿ ಮೇಲೆ 7 ದಿನಗಳ ಕಾಲ 23 ಜನ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ವರುಣಾಸಿಯ ಯೋಗಿನಾಥ್ ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಪ್ರಧಾನಿಯೇ ಈ ಬಗ್ಗೆ ಗಮಹರಿಸಿ ಪೊಲೀಸ್ ಆಡಳಿತಕ್ಕೆ ಸಮನ್ಸ್ ಜಾರಿಗೆ ಜಾರಿ ಮಾಡುವುದರ ಜೊತೆಗೆ ಅತ್ಯಾಚಾರಿಗಳನ್ನು ಗಲ್ಲಿಗೆ ಏರಿಸುವುದರ ಮುಖಾಂತರ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ಮತ್ತು ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷ ಬಲವಾಗಿ ಖಂಡಿಸಿ ಮಾನ್ಯ ತಹಸಿಲ್ದಾರ್ ಸಿಂಧನೂರು ಅವರ ಮೂಲಕ ಸನ್ಮಾನ್ಯ ಪ್ರಧಾನಮಂತ್ರಿಗಳು ಹಾಗೂ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಂ. ಗಂಗಾಧರ ರಾಜ್ಯ ಸಮಿತಿ ಸದಸ್ಯರು ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷ. ತುಳಸಮ್ಮ ಹೊಸ್ಮನಿ. ಹನುಮಂತ ಗೊಂಡಿಹಾಳ. ಎಚ್ ಆರ್. ಹೊಸಮನಿ. ಮುದಿಯಪ್ಪ ಹನುಮನಗರ. ಧರಗಯ್ಯ. ಹುಲುಗಪ್ಪ ಬಳ್ಳಾರಿ. ರುಕ್ಮಿಣಿಮ್ಮ. ಬಸವರಾಜ್ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ