ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಿಳಿಯಲ್ಲಿ ಇಂದು ಎಸ್ ಸಿ ಎಸ್ ಟಿ ಕೂದು ಕೊರತೆ ಸಭೆ ನಡೆಸಲಾಯಿತು.
ಪಿಎಸ್ಐ ಚಂದ್ರಶೇಖರ ಸಾಗನೂರ್ ಅವರ ನೇತೃತ್ವದಲ್ಲಿ ಶಾಂತಿ ಸಭೆಯನ್ನು ಕರೆಯಲಾಗಿತು. ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಪೂಜೆ ಮೂಲಕ ಶಾಂತಿ ಸಭೆಯನ್ನು ನಡೆಸಲಾಯಿತು.
ದಲಿತರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ತೊಂದರೆ ಮಾಡುವರು ಯಾರಾದರೂ ಇದ್ದರೆ ನಮ್ಮಗೆ ತಿಳಿಸಿ ಎಂದು ಪಿಎಸ್ಐ ಚಂದ್ರು ಸಾಗನೂರು ಅವರು ದಲಿತರಿಗೆ ಏನಾದರೂ ಕಷ್ಟ ಇದ್ದರೆ ನನ್ನ ಮುಂದೆ ತೋರಿಕೊಳ್ಳಿ ನನಗೆ ಆದಷ್ಟು ಯಾವುದೇ ಸಮಸ್ಯೆ ಇದ್ದರೂ ಬಗ್ಗೆ ಹರಿಸುತ್ತೇನೆ ಎಂದು ದಲಿತರಿಗೆ ಭರವಸೆ ನೀಡಿದರು. ಐಗಿಳಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಊರಿನ ದಲಿತ ಮುಖಂಡರಿಗೆ ಬರಮಾಡಿಕೊಂಡು ಅವರ ಊರಿನಲ್ಲಿ ದಲಿತರಿಗೆ ಅನ್ಯಾಯ ಏನಾದ್ರೂ ಆಗ್ತಾ ಇದ್ರೆ ಈ ಸಭೆಯ ಮೂಲಕ ನಮಗೆ ತಿಳಿಸಿ ಎಂದು ಪಿಎಸ್ಐ ಚಂದ್ರು ಸಾಗನೂರ್ ಅವರು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಕಾಂತ್ ಆಲಗೂರ್, ರವಿ ದೊಡಮನಿ, ಅನಿಲ್ ಶಿಂಗೆ, ಸಂದೀಪ, ಕಂಬಳೆ, ಇನ್ನು ಅನೇಕರು ಉಪಸ್ಥಿತರಿದ್ದರು.
ವರದಿ: ಅಜಯ ಕಾಂಬಳೆ