Ad imageAd image

ಸಮಾಜವನ್ನು ವ್ಯಸನ ಮುಕ್ತ ಮಾಡಲು ಸಾರ್ಜಜನಿಕರ ಸಹಕಾರ ಬೇಕು: PSI ಕಿರಣ ಮೊಹಿತೆ

Bharath Vaibhav
ಸಮಾಜವನ್ನು ವ್ಯಸನ ಮುಕ್ತ ಮಾಡಲು ಸಾರ್ಜಜನಿಕರ ಸಹಕಾರ ಬೇಕು: PSI ಕಿರಣ ಮೊಹಿತೆ
WhatsApp Group Join Now
Telegram Group Join Now

ಗೋಕಾಕ:  ಮಾದಕ ವಸ್ತುಗಳ ಬಳಕೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವುದರೊಂದಿಗೆ, ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯಲು ಕಾರಣವಾಗುತ್ತಿದೆ’ ಎಂದು ಗೋಕಾಕ ಗ್ರಾಮೀಣ ಪಿಎಸ್ಐ ಕಿರಣ ಮೊಹಿತೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಮೆಳವಂಕಿ ಗ್ರಾಮದ ನಮ್ಮೂರ ಸರಕಾರಿ ಪ್ರೌಡ ಶಾಲೆ ಮೆಳವಂಕಿಯಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿ ಮೊದಲು ಮಾದಕ ದ್ರವ್ಯವನ್ಮು ನೀವು ಸೇವಿಸುತ್ತೀರಿ.ಆಮೇಲೆ ಅದೆ ನಿಮ್ಮ ಜೀವವನ್ನು ಸೇವನೆ ಮಾಡುತ್ತದೆ.

ನಮ್ಮ ಅಮೂಲ್ಯ ಜೀವ ಉಳಿಯಬೇಕಾದರೆ ಮಾದಕ ಸಮಾಜವನ್ನು ವ್ಯಸನ ಮುಕ್ತ ಮಾಡಲು ಸಾರ್ಜಜನಿಕರ ಸಹಕಾರ ಬೇಕೆಂದರು. ಮಾದಕ ದ್ರವ್ಯ ಸೇವನೆ ಮಾಡುವವರನ್ನು ಕುಟುಂಬದ ಅಲ್ಲದೆ ಸಮಾಜ ಕೂಡ ಆತನನ್ನು ಧಿಕ್ಕರಿಸುತ್ತದೆ. ಯುವಕರು ಮಾದಕ ದ್ರವ್ಯಗಳ ವ್ಯಸನಿಗಳಾಗದೆ ವಿದ್ಯಾರ್ಥಿಗಳು ಸಮಾಜಕ್ಕೆ ಒಳಿತನ್ನು ಬಯಸುವ ವ್ಯಕ್ತಿಗಳಾಗಿ ಹೊರಹೊಮ್ಮಬೇಕೆಂದರು.

ಇವತ್ತಿನ ದಿನಾಚರಣೆಯಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಮಾದಕ ದ್ರವ್ಯ ವ್ಯಸನದ ಬಗ್ಗೆ ಎರ್ಪಡಿಸಿದ್ದ ಬಾಷಣ ಸ್ಪರ್ಧೆಯಲ್ಲಿ ಹಲವಾರು ವಿದ್ಯಾರ್ಥಿಗಳು ಭಾಷಣದ ಮೂಲಕ ಮಾದಕ ದ್ರವ್ಯದಿಂದ ಆಗುವ ದುಷ್ಪರಿಣಾಮದ ಬಗ್ಗೆ ತಿಳಿಸಿದರು.

Cpi ಸುರೇಶಬಾಬು ಇವರು ಬಾಷಣ ಮಾಡಿದ ವಿದ್ಯಾರ್ಥಿಗಳಿಗೆ ಶುಬ ಹಾರೈಸಿದರು.ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರು,ಶಿಕ್ಷಕರು, ಸಿಬ್ಬಂದಿಯಾದ ದುಂಡೇಶ ಅಂತರಗಟ್ಟಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮನೋಹರ ಮೇಗೇರಿ

WhatsApp Group Join Now
Telegram Group Join Now
Share This Article
error: Content is protected !!