ದಕ್ಷಿಣ ಕನ್ನಡ: ನೇಣು ಬಿಗಿದುಕೊಂಡು ಪಿಎಸ್ಐಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳದಲ್ಲಿ ಇಂದು (ಜು.20) ನಡೆದಿದೆ.
ಸೂಸೈಡ್ ಮಾಡಿಕೊಂಡಿರುವ ಪಿಎಸ್ಐ ಅನ್ನು ಕೀರಪ್ಪ ಟಕಾಂಬ್ಳೆ (54) ಎಂದು ಗುರುತಿಸಲಾಗಿದೆ. ಸಮವಸ್ತ್ರದಲ್ಲೇ ಅವರು ನೇಣಿಗೆ ಶರಣಾಗಿದ್ದಾರೆಂದು ಕಾರಣ ಮಾತ್ರ ಸದ್ಯಕ್ಕೆ ನಿಗೂಢವಾಗಿದೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದವರಾದ ಘಟಕಾಂಬ್ಳೆಯವರು ಶಿರಸಿ ಮಾರುಕಟ್ಟೆಯ ಠಾಣೆಯ ಎಎಸ್ಐಯಾಗಿದ್ದರು. ಇತ್ತೀಚೆಗಷ್ಟೇ ಬಡ್ತಿ ಪಡೆದು ಪಿಎಸ್ಐ ಆಗಿದ್ದರು.
ಕಳೆದ ಐದು ತಿಂಗಳ ಹಿಂದೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿದ್ದರು. ಬಂಟ್ವಾಳದ ತನಿಖಾ ವಿಭಾಗದಲ್ಲಿ ಪಿಎಸ್ಐ ಆಗಿ ಮುಂಬಡ್ತಿ ಪಡೆದಿದ್ದು, ಇದೀಗ ಬಂಟ್ವಾಳ ನಗರದ ಬಾಡಿಗೆ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.




