ಬಾದಾಮಿ : ಬಾದಾಮಿ ಪೊಲೀಸ್ ಠಾಣೆ ಪಿ ಎಸ್ ಐ ವಿಠಲ್ ನಾಯಿಕ್ ಹುಟ್ಟುಹಬ್ಬದ ಪ್ರಯುಕ್ತ ರೋಗಿಗಳಿಗೆ ವೃದ್ದಾಶ್ರಮಕ್ಕೆ ಹಣ್ಣು ಹಂಪಲು ವಿತರಣೆ ಮಾಡಿದ ಅಭಿಮಾನಿ ಬಳಗ.
ಬಾದಾಮಿ ಪೊಲೀಸ್ ಠಾಣೆ ಪಿ ಎಸ್ ಐ ಸಬ್ ಇನ್ಸ ಪೆಕ್ಟರ್ ವಿಠಲ್ ನಾಯಿಕ್ ಅವರ 39 ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಇಂದು ವೃದ್ದಾಶ್ರಮ ಹಾಗೂ ಬಾದಾಮಿ ತಾಲೂಕಾ ಆಸ್ಪತ್ರೆ ಹಾಗೂ ಕೆರೂರು ಸರಕಾರಿ ಆಸ್ಪತ್ರೆಗಳಿಗೆ ತೆರಳಿ ಹಣ್ಣು ಹಂಪಲು ವಿತರಿಸಿ ಸಾಮಾಜಿಕ ಕಳಕಳಿಯೊಂದಿಗೆ ಬಾದಾಮಿ ಪಿ ಎಸ್ ಐ ವಿಠಲ್ ನಾಯಿಕ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಪಿ ಎಸ್ ಐ ವಿಠಲ್ ನಾಯಿಕ್ ಅವರ ಅಭಿಮಾನಿ ಬಳಗದವರಾದ
ಡಾ: ಶ್ರೀದರ ಪತ್ತಾರ ಸೈನಿಕರು, ಹಾಗು ಆರಕ್ಷಕರ ಅಪ್ಪಟ ಅಭಿಮಾನಿ ರಾಚಣ್ಣ ಹಂಚಿನಮಠ,, ಮಂಜು ಸ್ವಾರಿ,, ವಿಠ್ಠಲ ದರ್ಮಟ್ಟಿ ಕುಮಾರ ತೇಜಸ್ ಅರಳಿಕಟ್ಟಿಮಠ,, ವಿರೇಶ ಜವಳಿ,,ಬಾದಾಮಿ ಆರೋಗ್ಯ ಇಲಾಖೆ ಮುಖ್ಯ ವೈದ್ಯಾಧಿಕಾರಿ ವಿರೇಶ್ ಶೆಟ್ಟರ್, ಹಾಗೂ ವೈದ್ಯೆ ಸಾಳಗುಂದಿ ಮೇಡಂ ಹಾಗೂ ಕೆರೂರ ಆಸ್ಪತ್ರೆಯ ವೈದ್ಯರುಗಳು ಮತ್ತು ಪಿ ಎಸ್ ಐ ಅವರ ಮಕ್ಕಳಾದ ಸ್ಪಂದನಾ ಹಾಗೂ ಸೃಜನ್ ಕೂಡ ಭಾಗವಹಿಸಿದ್ದರು.
ವರದಿ: ರಾಜೇಶ್. ಎಸ್. ದೇಸಾಯಿ




