Ad imageAd image

ಕ್ಷುಲ್ಲಕ ಕಾರಣಕ್ಕೆ ಅನಾರೋಗ್ಯ ಪೀಡಿತನನ್ನು ಥಳಿಸಿ ದರ್ಪ ತೋರಿದ ಪಿಎಸ್ ಐ

Bharath Vaibhav
ಕ್ಷುಲ್ಲಕ ಕಾರಣಕ್ಕೆ ಅನಾರೋಗ್ಯ ಪೀಡಿತನನ್ನು ಥಳಿಸಿ ದರ್ಪ ತೋರಿದ  ಪಿಎಸ್ ಐ
WhatsApp Group Join Now
Telegram Group Join Now

ಕೆರೂರ:  ಕ್ಷುಲ್ಲಕ ಕಾರಣಕ್ಕೆ ಠಾಣೆಗೆ ಕರೆದೊಯ್ದು ಥಳಿಸಿ ದರ್ಪ ತೋರಿ ಉದ್ಧಟತನ ಮೆರೆದ ಬಾದಾಮಿ ತಾಲ್ಲೂಕಿನ ಕೆರೂರ ಪಟ್ಟಣದ ಪಿ. ಎಸ್.ಐ. ಭೀಮಪ್ಪ ರಬಕವಿಯ ಗೂಂಡಾವರ್ತನೆ.

ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ. ಭೀಮಪ್ಪ ಮೇಟಿ ಎಂಬುವನು ಕೆರೂರು ವ್ಯಾಪ್ತಿಯ ಬೆಳ್ಳಿಕಿಂಡಿ ಗ್ರಾಮದ ತಿಪ್ಪೆ ವಿಚಾರಕ್ಕೆ ಸಂಬಂಧಪಟ್ಟಂತೆ ಕ್ಷುಲ್ಲಕ ಕಾರಣಕ್ಕೆ ಸಂಬಂಧಪಟ್ಟಂತೆ ದೂರು ನೀಡಲು ಹೋದ ಹಿನ್ನೆಲೆಯಲ್ಲಿ ಮೊದಲೇ ವಯೋವೃದ್ಧ ಹಾಗೂ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಠಾಣೆಗೆ ಕರೆತಂದು ಸಿ ಸಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗದ ಹಾಗೆ ಪಿ. ಎಸ್. ಐ. ಭೀಮಪ್ಪ ರಬಕವಿ ಹಾಗೂ ಪೇದೆಗಳು ಸೇರಿ ಮನಬಂದಂತೆ ಹಲ್ಲೆ ಮಾಡಿ ದರ್ಪ ಮೆರೆದಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಹಾಗೆ ಪೊಲೀಸರು ಗೂಂಡಾ ವರ್ತನೆ ನಡೆಸಿದ್ದಾರೆ ಎನ್ನಲಾಗ್ತಾಯಿದೆ.

ಕೈಯಲ್ಲಿ ಪೊಲೀಸ್ ಪವರ್ ಇದೆ ಎಂದು ಮನಬಂದಂತೆ ನಡೆದುಕೊಳ್ಳುತ್ತಿರುವ ಇಂಥವರಿಂದ ಇಡೀ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ತಂದಿಡುತ್ತಿದ್ದಾರೆ ಎನ್ನಬಹುದು. ಇಂತಹ ದರ್ಪ ತೋರುವ ಅಧಿಕಾರಿಗಳ ವಿರುದ್ದ ಬಾದಾಮಿ ಶಾಸಕ ಭೀಮಸೇನ್ ಚಿಮ್ಮನಕಟ್ಟಿ ಯವರು ಗಮನಹರಿಸಿ ಶಿಸ್ತಿನ ಕಾನೂನು ಕ್ರಮ ಜರುಗಿಸಲು ಅಮಾನತು ಮಾಡಲು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ ಎನ್ನಲಾಗ್ತಾ ಇದೆ. ಬಾದಾಮಿ ಮತಕ್ಷೇತ್ರದಲ್ಲಿ ಎರಡೂ ವರ್ಷದಲ್ಲಿ ಪೋಲಿಸ್ ಇಲಾಖೆ ಅಧಿಕಾರಿಗಳು ಒಂದಿಲ್ಲೊಂದು ದಪ೯ ದೌರ್ಜನ್ಯ ದಬ್ಬಾಳಿಕೆ ನಡೆತಾ ಇದೆ, ಮೊನ್ನೆ ಕೂಡ ಬಾದಾಮಿ ಪಿಎಸ್ಐ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಸುದ್ದಿ ಪ್ರಸಾರ ಆದ ತಕ್ಷಣ ಬಾಗಲಕೋಟೆ ಜಿಲ್ಲಾವರಿಷ್ಠಾಧಿಕಾರಿ ಅವರು ಹಾಗೂ ಬಾದಾಮಿ ಶಾಸಕರು ಗಮನ ಹರಿಸಿ.

ವರದಿ:-s s kavalapure

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!