ಚಾಮರಾಜನಗರ : ಕರ್ನಾಟಕ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಹಿನ್ನಲೆ ಪ್ರಾಧಿಕಾರದಿಂದ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಸರ್ಕಲ್ ಇನ್ಸ್ಪೆಕ್ಟರ್. ಎಂ.ಶಿವಮಾದಯ್ಯ ರವರು
ಮಲೆ ಮಹದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಯವರ ಸಮ್ಮುಖದಲ್ಲಿ, ಕಾರ್ಯದರ್ಶಿಗಳಾದ ಶ್ರೀ ರಘು ಹಾಗೂ ಡಿವೈಎಸ್ಪಿ ಧರ್ಮೇಂದ್ರ ರವರ ಪ್ರೋತ್ಸಾಹದೊಂದಿಗೆ ಮಾದಪ್ಪನ ಭಕ್ತಿ ಗೀತೆಯನ್ನು ಹಾಡುವ ಮೂಲಕ ಲಕ್ಷಾಂತರ ಭಕ್ತರನ್ನು ರಂಜಿಸಿದರು…

ನೆರದಿದ್ದ ಭಕ್ತರು ಹಾಡನ್ನು ಕೇಳಿ ಪೊಲೀಸ್ ಅಧಿಕಾರಿಗೆ ಜೈ ಎಂದರು.ಪೊಲೀಸ್ ಇಲಾಖೆ ರಕ್ಷಣೆ ಜೊತೆಗೆ ಮನರಂಜನೆಯನ್ನು ನೀಡಿದ್ದನ್ನು ಕಂಡು ಸಾರ್ವಜನಿಕರು ಶ್ಲಾಘನೆ ಮಾಡುವ ಮೂಲಕ ಪ್ರೋತ್ಸಾಹ ಮಾಡಿದರು…

ವರದಿ : ಸ್ವಾಮಿ ಬಳೇಪೇಟೆ .




