ಗೋಕಾಕ : ಕೆಲಸ ನಿರ್ವಹಿಸುತ್ತಿದ್ದ ಖಾಸಗಿ ಆಸ್ಪತ್ರೆ ಸಿಬ್ಬಂದಿಯೊಬ್ಬ ಆಸ್ಪತ್ರೆಯ ರೂಮಿನಲ್ಲಿದ್ದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಾ ಪಂಚಾಯತ ಎದುರಗಡೆ ಇರುವ ಡಾ: ಆಜರಿ,ಸರ್ಜಿಕಲ್ ಕ್ಲೀನಿಕ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.
ಗೋಕಾಕ ತಾಲೂಕಿನ ಲೊಳಸೂರ ಗ್ರಾಮದ ಸುಭಾಸ ರಾಮಚಂದ್ರ ಬಾಗಾಯಿ (32) ಆತ್ಮಹತ್ಯೆ ಮಾಡಿಕೊಂಡ ಯುವಕ ಆಸ್ಪತ್ರೆಯ ಸಿಬ್ಬಂದಿಯಾಗಿದ್ದ. ಭಾನುವಾರ ರಜೆಯಿದ್ದ ಕಾರಣ ಆಸ್ಪತ್ರೆಯಲ್ಲಿ ಒಬ್ಬನೆ ರಾತ್ರಿ ಇದ್ದನೆಂದು ತಿಳಿದು ಬಂದಿದೆ.
ಆಸ್ಪತ್ರೆ ಬೀಗದ ಕೈಗಳೆಲ್ಲ ಈತನ ಬಳಿಯೇ ಇದ್ದವು. ಆದರೆ ಭಾನುವಾರ ಈತ ಆಸ್ಪತ್ರೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಇನ್ನು ಸುದ್ದಿ ಮಾಡಲು ವಿಡಿಯೋ ಮಾಡಲು ಹೋದ ಪತ್ರಕರ್ತರಿಗೆ ಎ,ಎಸ್,ಐ, ಇವರು ಪತ್ರಕರ್ತರನ ಮೊಬೈಲಗೆ ಕೈ ಅಡ್ಡ ಹಾಕಿ ತಡೆದು ಬೆದರಿಸಿದ್ದಾನೆ.ಇದರಿಂದ ಪೋಲಿಸರ ನಡೆ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಪತ್ರಕರ್ತರಿಗೆ ಹೀಗಾದರೆ ಸಾರ್ವಜನಿಕರ ಗತಿಯೇನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಪ್ರಕರಣ ದಾಖಲಿಸಿಕೊಂಡಿರುವ ಗೋಕಾಕ ನಗರ ಠಾಣೆ ಪೊಲೀಸರು ಸಂಶಯಕ್ಕೆ ಎಡೆಮಾಡಿಕೊಟ್ಟಿರುವ ಈ ಆತ್ಮಹತ್ಯೆಯ ಪ್ರಕರಣ ಯಾವ ರೀತಿ ಬೇದಿಸುತ್ತಾರೊ ಕಾದು ನೋಡಬೇಕಾಗಿದೆ.
ವರದಿ:ಮನೋಹರ ಮೇಗೇರಿ