ಐಗಳಿ: –ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಅಥಣಿ ಸಾರಿಗೆ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ ಹಲವಾರು ಬಾರಿ ಮನವಿ ಪತ್ರ ನೀಡಿ ಪತ್ರಿಕೆಯಲ್ಲಿ ಸಮಸ್ಯೆ ಕುರಿತು ಸುದ್ದಿ ಪ್ರಕಟವಾದರೂ ಸಾರಿಗೆ ಅಧಿಕಾರಿಗಳು ಮಾತ್ರ ಸ್ಪದಿಸುತ್ತಿಲ್ಲ ಎಂದು ಅಥಣಿ ತಾಲೂಕಿನ ಐಗಳಿ ಗ್ರಾಮಸ್ಥರು ಅಧಿಕಾರಿಗಳ ವಿರುಧ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಗಳಿ ಗ್ರಾಮಕ್ಕೆ ದಿನ ನಿತ್ಯ ಎರಡು ಬಸ್ ಮಾತ್ರ ಸಂಚಾರ ಮಾಡುತ್ತವೆ .
ಅವು ಕೂಡಾ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಇದರಿಂದ ಶಾಲಾ ವಿಧ್ಯಾರ್ಥಿಗಳು ನೌಕರರು ಸಾರ್ವಜನಿಕರು ದಿನ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈಗ ಇರುವ ಸಾರಿಗೆ ವ್ಯವಸ್ಥೆ ಅಥಣಿಯಿಂದ 8:00 ಗಂಟೆಗೆ ಐಗಳಿ ಗ್ರಾಮಕ್ಕೆ ಆಗಮಿಸಿ ಅರಟಾಳ ಗ್ರಾಮಕ್ಕೆ ಎರಡು ಬಾರಿ ಹೋಗಿ ಬರುವುದರಲ್ಲಿ 9:45: ಆಗುತ್ತದೆ.
ಇಲ್ಲಿಂದ ಹೋದ ಬಸ್ ಸಂಜೆ 3 : 30ಕ್ಕೆ ವಾಪಸ್ ಆಗುತ್ತದೆ. ಇದೆ ತರಹ ಅಥಣಿ ಬನ್ನೂರ ಬಸ್ ಮುಜಾಂನೆ 9:00 ಗಂಟೆಗೆ ಆಗಮಿಸಿ ವಾಪಸ್ 10: 45 ಕ್ಕೆ ಐಗಳಿ ಗ್ರಾಮದಿಂದ ಅಥಣಿಗೆ ತರೆಳಿ ವಾಪಸ್ ಮಧ್ಯಾಹ್ನ 12:00 ಗಂಟೆಗೆ ಆಗಮಿಸಿ 2 :00 ಗಂಟೆಗೆ ಐಗಳಿಗೆ ಆಗಮಿಸುತ್ತದೆ. ನಂತರ ಸಂಜೆ 4:00 ಗಂಟೆಗೆ ವಾಪಸ್ ಆಗುತ್ತದೆ .
ಈ ಎರಡು ಬಸ್ ಗಳು ಮಾತ್ರ ಈ ಮಾರ್ಗವಾಗಿ ಸಂಚಾರ ಮಾಡುತ್ತವೆ ಸರ್ಕಾರಿ ರಜೆ ದಿನ ಬಸ್ ಸಂಚಾರವೇ ಇರುವುದಿಲ್ಲ. ಇದರಿಂದ ವಿಧ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲು ಸಾಧ್ಯವಾಗುತ್ತಿಲ್ಲ. 2024ರ ಕಾಲದಲ್ಲಿಯೂ ಐಗಳಿ ಗ್ರಾಮಕ್ಕೆ ಎಂದು ಸ್ವಂತ ಬಸ್ ಇಲ್ಲದಿರುವುದು ವಿರ್ಪಸ . ಈ ಕುರಿತು ಕಳೆದ ತಿಂಗಳು ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಭೆಯಲ್ಲಿ ಅಧ್ಯಕ್ಷರಾದ ಸಿದ್ದಾರ್ಥ ಸಿಂಗೆ ಅವರು ಅಥಣಿ ಸಾರಿಗೆ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು ಕೂಡಾ ಐಗಳಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಮಾಡುವಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಮನಸ್ಸು ಮಾಡಿಲ್ಲ ಈ ಕುರಿತು ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಅವರು ಗಮನಹರಿಸಿ ಐಗಳಿ ಗ್ರಾಮದ ಜನರಿಗೆ ಸಾರಿಗೆ ವ್ಯವಸ್ಥೆ ಅನೂಕೂಲ ಮಾಡಿಕೂಡಬೇಕು ಎಂದು ಒತ್ತಾಯಿಸಿದ್ದಾರೆ.
ಇದೆ ರೀತಿಯಾಗಿ ಸಾರಿಗೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದರೆ ಗ್ರಾಮದ ಮುಖಂಡರೊಂದಿಗೆ ಚರ್ಚಿಸಿ ವಿವಿಧ ಸಂಘಟನೆ ಒಕ್ಕೂಟ ಮತ್ತು ವಿಧ್ಯಾರ್ಥಿಗಳೊಂದಿಗೆ ಐಗಳಿ ಕ್ರಾಸ್ ಮುಖ್ಯ ಹೆದ್ದಾರಿ ಬಂದ ಮಾಡಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಂದೇನಮಾಜ ಜಗಲೀಸಾಬ್ ಮುಜಾವರ ಸಾಮಾಜೀಕ ಕಾರ್ಯಕರ್ತರಾದ ಎ ಆರ್ ಪಾಟೀಲ. ಅಮೀತ ನಿಂಬಾಳಕರ್ ಪ್ರಶಾಂತ್ ಬಿರಾದರ ಪ್ರಶಾಂತ್ ಕನಶೆಟ್ಟಿ ದಲಿತ ಮುಖಂಡರಾದ ಆಕಾಶ ಮಾದರ ಸೇರಿದಂತೆ ಮುಂತಾದವರು ಉಪಸ್ಥಿತಿ ಇದ್ದರು.
ಅಥಣಿ , ಯಂಕಚಿ, ಯಲಹಡಗಿ ಅಡಹಳ್ಳಿ , ಕೋಹಳ್ಳಿ ಐಗಳಿ , ತೆಲಸಂಗ ಮಾರ್ಗವಾಗಿ ಅಥಣಿ ವಿಜಯಪೂರ. ಮತ್ತು ವಿಜಯಪೂರ ಮಿರಜ . ಬಸ್ ಸಂಚಾರ ಪ್ರಾರಂಭ ಮಾಡಿದರೆ ವಿಜಯಪುರಕ್ಕೆ ತೆರಳುವ ಈ ಭಾಗದ. ಹಳ್ಳಿಗಳ ಸರ್ವಾಜನಿಕರಿಗೆ ವಿಧ್ಯಾರ್ಥಿಗಳಿ ಇನ್ನೂ ಅನೂಕೂಲವಾಗಲಿದೆ ಇದರಿಂದ ಸಾರಿಗೆ ಇಲಾಖೆಗೆ ಲಾಭದಾಯಕವಾಗಲಿದೆ.
ವರದಿ:- ಆಕಾಶ ಎಮ್




