ಗೋಕಾಕ : ಸಾರ್ವಜನಿಕರಿಗೆ ವಿಶ್ರಾಂತಿ,ಸಭಾ ಸಮಾರಂಭಗಳಿಗೆ ನಿರ್ಮಿಸಲಾದ ರಂಗ ಮಂದಿರ ಇವತ್ತು ಪಿಡಿಓ ನಿರ್ಲಕ್ಷದಿಂದ ಮೂರ್ತದ ಜೊತೆ ಮಲವಿಸರ್ಜನೆ ಮಾಡುವ ಮುತ್ರಾಲಯವಾಗಿ ಪರಿವರ್ತನೆಗೊಂಡಿದೆ.
ಹೌದು ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ವಡೆರಹಟ್ಟಿ ಗ್ರಾಮ ಪಂಚಾಯತ ಪಿಡಿಓಗೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿನೆ ಇಲ್ಲಾ ಎಂದು ರಂಗಮಂದಿರದ ಸುತ್ತ ನೋಡಿದರೆ ಸಾಕು.
ಇನ್ನು ಮುತ್ರಾಲಯದ ಪಕ್ಕ ಬೊರವೆಲ್ ಇದ್ದು ಇಲ್ಲಿನ ನೀರನ್ನು ಸುತ್ತಮುತ್ತಲಿನ ಕುಟುಂಬಸ್ಥರು ಉಪಯೋಗಿಸುತ್ತಿದ್ದಾರೆ,ಮಲವಿಸರ್ಜನೆಯ ನೀರು ಬೊರವೇಲ ನೀರಲ್ಲಿ ಸೇರುವುದರಿಂದ ಜನರ ಆರೋಗ್ಯದ ಮೇಲೆ ಗಂಬೀರ ಪರಿಣಾಮ ಬೀಳುವ ಸದ್ಯತೆ ಇದೆ.
ಇಷ್ಟೆಲ್ಲಾ ಗೊತ್ತಿದ್ದರೂ ಸಹ ವಡೆರಹಟ್ಟಿ ಪಿಡಿಓ ಮಾತ್ರ ಕ್ಯಾರೆ ಅನ್ನುತ್ತಿಲ್ಲ,,ಇವರಿಗೆ ಗ್ರಾಮದ ಸಾರ್ವಜನಿಕರ ಕರ ಬೇಕು ಆದರೆ ಗ್ರಾಮಸ್ಥರ ಆರೋಗ್ಯಬೇಡಾ ಅನ್ನುಂತಿದೆ ಪಿಡಿಓನ ಕಾರ್ಯ.
ಇನ್ನಾದರೂ ಪಿಡಿಓರವರು ಎಚ್ಚೆತ್ತುಗೊಂಡು ಮುತ್ರಾಲಯವನ್ನು ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ : ಮನೋಹರ ಮೇಗೇರಿ




