ಬೆಳಗಾವಿ: ಕಾಲೇಜಿನ ಮೊದಲ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ನಡೆದಿದೆ.
ಆಫ್ರಿನ್ ಜಾಮದಾರ್ (17) ಮೃತ ವಿದ್ಯಾರ್ಥಿನಿ. ವಸತಿ ಕಾಲೇಜಿನ ಮೊದಲ ಮಹಡಿಯಲ್ಲಿ ಮಧ್ಯರಾತ್ರಿವರೆಗೂ ವಿದ್ಯಾರ್ಥಿನಿ ಓದುತ್ತಾ ಇದ್ದಳು.
ಇಂದು ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ನಿನ್ನೆ ಮಧ್ಯರಾತ್ರಿವರೆಗೂ ಓದುತ್ತಿದ್ದಳು. ಆಯತಪ್ಪಿ ಕೆಳಗೆ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಮೃತ ವಿದ್ಯಾರ್ಥಿನಿ ಗೋಕಾಕ್ ತಾಲೂಕಿನ ಶಿಂದಿ ಕುರುಬೇಟ್ ಗ್ರಾಮದವಳು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.