ಬಾದಾಮಿ:-ನಾಗರ ಪಂಚಮಿ ಹಬ್ಬ ಎಂದರೆ ನಾಗರಹಾವಿಗೆ ಪೂಜೆ ಸಲ್ಲಿಸುವ ದೊಡ್ಡ ಹಬ್ಬ. ನಾಗರಪಂಚಮಿ ಹಬ್ಬದಂದು ನೂಲು ಒಬ್ಬಟ್ಟು ಕಡಲೆಕಾಳು ಸಮೇತ ಹಾಲು ಹುಯ್ಯುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಹಬ್ಬವಾಗಿದೆ.ನಾಗರಪಂಚಮಿ ಹಬ್ಬಕ್ಕೆ ಕಲ್ಲು ನಾಗಪ್ಪನಿಗೆ ಹಾಲು ಹುಯ್ಯುವುದು ಸರ್ವೇ ಸಾಮಾನ್ಯ ಆದರೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಜಯನಗರದ ನಿವಾಸಿ ಸ್ನೇಕ್ ಮಹಾಂತೇಶ್ ಅವರು ಮನೆಯಲ್ಲಿ ನಿಜವಾದ ನಾಗರಹಾವಿಗೆ ಪೂಜೆ ಸಲ್ಲಿಸಿದ್ದು ಬಹಳ ವಿಶೇಷವಾಗಿತ್ತು.
ಬಾದಾಮಿಯ ಸ್ನೇಕ್ ಮಹಾಂತೇಶ್ ಅಂದರೆ ಇಡೀ ಸುಮಾರು 7000 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದ ಉರಗ ರಕ್ಷಕ ಎಂದೇ ಖ್ಯಾತಿ ಪಡೆದಿದ್ದಾರೆ. ಇವರು ಕರ್ನಾಟಕದ ಹೆಸರಾಂತ ಸ್ನೇಕ್ ಶ್ಯಾಮ್ ಅವರ ಹತ್ತಿರ ಹಾವು ಹಿಡಿಯೋದರಲ್ಲಿ ತರಬೇತಿ ಪಡೆದು ಪರಿಣತಿ ಹೊಂದಿದ್ದಾರೆ. ಎಲ್ಲೆ ಹಾವು ಬಂದರೂ ಸ್ನೇಕ್ ಮಹಾಂತೇಶ್ ಅವರಿಗೆ ಫೋನ್ ಮಾಡಿದರೆ ಹಾವು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವ ಉರಗ ರಕ್ಷಣೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಹಾವುಗಳು ಪರಿಸರ ಸ್ನೇಹಿಯಾಗಿವೆ ಅವುಗಳನ್ನು ಕೊಲ್ಲಬೇಡಿ ನನ್ನನ್ನು ಸಂಪರ್ಕಿಸಿ ಎನ್ನುವುದು ಸ್ನೇಕ್ ಮಹಾಂತೇಶ್ ಅವರ ಸಂದೇಶವಾಗಿದೆ.
ವರದಿ:- ರಾಜೇಶ್. ಎಸ್. ದೇಸಾಯಿ