ಅಥಣಿ : ನಾಳೆ ಡಿಸೆಂಬರ್ 21 ರಂದು ನಡೆಯುವ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮದ ನಿಮಿತ್ಯವಾಗಿ ಹಮ್ಮಿಕೊಂಡ ಅಥಣಿ ಆರೋಗ್ಯ ಇಲಾಖೆ ಹಾಗೂ ರೋಟರಿ ಕ್ಲಬ್ ಅಥಣಿ ಹಾಗೂ ಅನ್ನಪೂರ್ಣ ಕಾಲೇಜು ಹಾಗೂ ವಿವೇಕಾನಂದ ಸ್ಕೂಲ್ ವಿದ್ಯಾರ್ಥಿಗಳಿಂದ ಜನಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಆರೋಗ್ಯ ಇಲಾಖೆಯ ತಾಲೂಕು ಅಧಿಕಾರಿಗಳಾದ ಡಾಕ್ಟರ. ಬಿ ಜಿ ಕಾಗೆ ಅವರು ಮಾತನಾಡಿ 1ರಿಂದ 5 ವರ್ಷದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಪೋಲಿಯೋ ಭೂತಗಳನ್ನು ಮಾಡಲಾಗುವುದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕೆಂದು ಕರೆ ನೀಡಿದರು.
ಹಾಗೂ ಆನಂದ್ ಗುಜಗಾಂವಿ. ರೋಟರಿ ಕ್ಲಬ್ ತಾಲೂಕು ಅಧ್ಯಕ್ಷರಾದ ಸಚಿನ್ ದೇಸಾಯಿ ಹಾಗೂ ಶೇಖರ್ ಕೋಲಾರ್. ಸಿಡಿಪಿಒ ಇಲಾಖೆ ಅಧಿಕಾರಿ ಮಂಜುನಾಥ್ ಸರ್ ಹಾಗೂ ಅಂಗನವಾಡಿ ಕಾರ್ಯಕರ್ತರು ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ರಾಜು ವಾಘಮಾರೆ.




