Ad imageAd image

ಸಂತ ತುಕಾರಾಮ್ ಮಹಾರಾಜ್ ಎಂದು ಪುಣೆ ವಿಮಾನ ನಿಲ್ದಾಣ ಮರುನಾಮಕರಣ 

Bharath Vaibhav
ಸಂತ ತುಕಾರಾಮ್ ಮಹಾರಾಜ್ ಎಂದು ಪುಣೆ ವಿಮಾನ ನಿಲ್ದಾಣ ಮರುನಾಮಕರಣ 
WhatsApp Group Join Now
Telegram Group Join Now

ಪುಣೆ : ಮಹಾರಾಷ್ಟದ ಪುಣೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಾಡುವ ಪ್ರಸ್ತಾಪದ ಬಗ್ಗೆ ಮಹಾರಾಷ್ಟ್ರ ಸರ್ಕಾರ, ಸಂಪುಟ ಸಭೆಯಲ್ಲಿ ಇಂದು ಅನುಮೋದನೆ ನೀಡಿದೆ.

ಈ ವಿಮಾನ ನಿಲ್ದಾಣಕ್ಕೆ ಇನ್ಮೇಲೆ ಜಗದ್ಗುರು ಸಂತ ತುಕಾರಾಮ್ ಮಹಾರಾಜ್ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ.

ಈ ವಿಮಾನ ನಿಲ್ದಾಣದ ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಳುಹಿಸಲು ಮಹಾರಾಷ್ಟ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.ಈ ಹಿಂದೆಯೇ ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತನಾಡಿದ್ದು, ಈ ಪ್ರಸ್ತಾಪಕ್ಕೆ ಕೇಂದ್ರದಲ್ಲಿ ಅನುಮೋದನೆ ಸಿಗುವಂತೆ ಮಾಡುವ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದರು.

ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ಸಿಕ್ಕಿದೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮೊಹೋಲ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!