Ad imageAd image

ಅಪ್ರಾಪ್ತನಿಗೆ ವಾಹನ ಚಲಾಯಿಸಲು ಕೊಟ್ಟ ಮಾಲೀಕರಿಗೆ ನ್ಯಾಯಾಲಯದಿಂದ ದಂಡ ಮತ್ತು ಶಿಕ್ಷೆ ಪ್ರಕಟ

Bharath Vaibhav
ಅಪ್ರಾಪ್ತನಿಗೆ ವಾಹನ ಚಲಾಯಿಸಲು ಕೊಟ್ಟ ಮಾಲೀಕರಿಗೆ ನ್ಯಾಯಾಲಯದಿಂದ ದಂಡ ಮತ್ತು ಶಿಕ್ಷೆ ಪ್ರಕಟ
WhatsApp Group Join Now
Telegram Group Join Now

 ಅಥಣಿ : ದಿನಾಂಕ 31-12-2023 ರಂದ ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯ ಐಗಳಿ ಕ್ರಾಸ್ ಬಳಿ ಎರಡು ಬೈಕಗಳ ನಡೆವಿ ಭೀಕರ ರಸ್ತೆ ಅಪಘಾತವಾಗಿ ಜಮಖಂಡಿಯ ಚೇತನ ಆನಂದ ಕಾಂಬಳೆ ಇತನಿಗೆ ಗಂಭೀರ ಗಾಯವಾಗಿತ್ತು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯ ಮರಣ ಹೊಂದಿದ್ದು ಈ ಕುರಿತು ಅದು ಐಗಳಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕಲಂ ೨೭೯, ೩೩೭ ೩೩೮ ೩೦೪(ಎ) ಐಪಿಸಿ ಹಾಗೂ ಕಲಂ ೧೯೪ (ಡಿ) ಸಕ ೧೨೮ ,೧೭೭ ಸಕ ೧೮೦,೧೪೬ ಸಕ ೧೯೬ ಮೋಟಾರ ವಾಹನ ಕಾಯ್ದೆಯಡಿಯಲ್ಲಿ ಸಿಪಿಐ ರವರಾದ ಸಂತೋಷ ಹಳ್ಳೂರ ರವರು ಮಾನ್ಯ ನ್ಯಾಯಲಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರಿಂದ ಸಿ ಸಿ ನಂ ೩೩೯/೨೦೨೫ ಪ್ರಕರಣವು ದಾಖಲಾಗಿತ್ತು.

ಅಥಣಿ ಮಾನ್ಯ ೧ ನೇ ಅಧಿಕ ಸಿ ಜೆ ಮತ್ತು ಜೆ ಎಮ್ ಎಪ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷಕುಮಾರ ದೈವಜ್ಝ ರವರು ಆರೋಪಿ ನಂ೨ ಕುಮಾರ ಸಿದರಾಯ ಜಗದೇವ ಇತನು ಆಪ್ರಾಪ್ತ ಬಾಲಕನಿಗೆ ವಿಮೆ ಇಲ್ಲದ ತನ್ನ ಮೋಟಾರು ಸೈಕಲನ್ನು ಚಲಾಯಿಸಲು ನೀಡಿದ್ದಕ್ಕಾಗಿ ಮಾನ್ಯ ನ್ಯಾಯಾಲವು ಆರೋಪಿಯ ಮೇಲೆ ಆರೋಪಣೆ ಸಾಭೀತಾಗಿದೆ ಎಂದು ಆರೋಪಿಗೆ ರೂ. ೨೫ ಸಾವಿರ ರೂ ದಂಡ ಮೋಟಾರ ಸೈಕಲ್ ವಿಮೆ ಇಲ್ಲದ್ದಕ್ಕಾಗಿ ರೂ.೧ ಸಾವಿರ ದಂಡ ಒಟ್ಟು ೨೬ ಸಾವಿರ ರೂ. ಹಾಗೂ ೧ ದಿನದ ಸಜೆ ವಿಧಿಸಿ ದಿನಾಂಕ ೦೪-೦೭-೨೦೨೫ ರಂದು ಅಥಣಿ ನ್ಯಾಯಾಲಯ ಆದೇಶಿಸಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!