Ad imageAd image

ಸುಲಭ ಗೆಲುವಿನೊಂದಿಗೆ 2 ನೇ ಸ್ಥಾನಕ್ಕೆ ಜಿಗಿದ ಪಂಜಾಬ್ ಕಿಂಗ್ಸ್

Bharath Vaibhav
ಸುಲಭ ಗೆಲುವಿನೊಂದಿಗೆ 2 ನೇ ಸ್ಥಾನಕ್ಕೆ ಜಿಗಿದ ಪಂಜಾಬ್ ಕಿಂಗ್ಸ್
WhatsApp Group Join Now
Telegram Group Join Now

ಬೆಂಗಳೂರು: ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 5 ವಿಕೆಟ್ ಗಳ ಸುಲಭ ಗೆಲುವು ಪಡೆಯಿತು.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಯಂಕಾಲ ಸುರಿದ ಮಳೆಯಿಂದ 14 ಓವರುಗಳಿಗೆ ಪಂದ್ಯ ಸೀಮಿತಗೊಂಡಿತು. ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವಿಕೆಟ್ ಗೆ 95 ರನ್ ಮಾತ್ರ ಗಳಿಸಿತು. ಸುಲಭ ಗೆಲುವಿನ ಗುರಿ ಬೆನ್ನಟ್ಟಿದ ಪಂಜಾಬ್ 12.1 ಓವರುಗಳಲ್ಲಿ 5 ವಿಕೆಟ್ ಗೆ 98 ರನ್ ಗಳಿಸಿ ಸುಲಭವಾಗಿ ಪಂದ್ಯ ಗೆದ್ದಿತು.

ಪಂಜಾಬ್ ಕಿಂಗ್ಸ್ ಈ ಗೆಲುವಿನೊಂದಿಗೆ 7 ಪಂದ್ಯಗಳಿಂದ 10 ಅಂಕಗಳನ್ನು ಕಲೆ ಹಾಕಿದ್ದು, ಪಾಯಿಂಟ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಗಳಿಸಿತು.  ದೆಹಲಿ ಕ್ಯಾಪಿಟಲ್ಸ್ 6 ಪಂದ್ಯಗಳಿಂದ  10 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

ಸ್ಕೋರ್ ವಿವರ:

ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಓವರುಗಳಲ್ಲಿ 9 ವಿಕೆಟ್ ಗೆ 95

ಟಿಮ್ ಡೆವಿಡ್ 50 ( 26 ಎಸೆತ, 5 ಬೌಂಡರಿ, 3 ಸಿಕ್ಸರ್) ಚಹಲ್ 11 ಕ್ಕೆ 2, ಮಾರ್ಕೋ ಜಾನ್ಸನ್ 10 ಕ್ಕೆ 2)

ಪಂಜಾಬ್ ಕಿಂಗ್ಸ್ 12.1 ಓವರುಗಳಲ್ಲಿ 5 ವಿಕೆಟ್ ಗೆ 98

( ನೆಹಲ್ ವಡೆರಾ 33 ( 19 ಎಸೆತ, 3 ಬೌಂಡರಿ, 3 ಸಿಕ್ಸರ್), ಜೋಶ್ ಹೆಜಲ್ ವುಡ್ 14 ಕ್ಕೆ 3

ಪಂದ್ಯ ಶ್ರೇಷ್ಠ: ಟಿಮ್ ಡೆವಿಡ್

WhatsApp Group Join Now
Telegram Group Join Now
Share This Article
error: Content is protected !!