ಹೈದರಾಬಾದ್: ಐಪಿಎಲ್‌ನಲ್ಲಿ ನಿನ್ನೆ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿ ಬಹೃತ್ ಮೊತ್ತದ ಗುರಿಯನ್ನು ನೀಡಿತ್ತು.
ಇದಕ್ಕೆ ಉತ್ತರವಾಗಿ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಶತಕದ ಬಲದಿಂದ 18.3 ಓವರ್ನಲ್ಲೆ 246 ರನ್‌ಗಳ ಗುರಿಯನ್ನು ತಲುಪುವ ಮೂಲಕ ದಾಖಲೆ ಬರೆಯಿತು. ಐಪಿಎಲ್ ಇತಿಹಾಸದಲ್ಲಿ ಎರಡನೇ ಬೃಹತ್ ಮೊತ್ತದ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದ ದಾಖಲೆಯನ್ನು ಹೈದರಾಬಾದ್ ಹೆಸರಿಗೆ ಸೇರಿತು.
ಐಪಿಎಲ್‌ನಲ್ಲಿ ಅತಿ ಹೆಚ್ಚು ಮೊತ್ತದ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ದಾಖಲೆ ಪಂಜಾಬ್ ಕಿಂಗ್ಸ್ ಹೆಸರಿನಲ್ಲಿದೆ. ಕೆಕೆಆರ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಪಂಜಾಬ್ 262 ರನ್‌ಗಳ ಗುರಿಯನ್ನು ಸಾಧಿಸಿತ್ತು. ಕ್ರಿಕೆಟ್‌ನಲ್ಲಿ ನಾಲ್ಕನೇ ಅತ್ಯುನ್ನತ ಗುರಿಯನ್ನು ಸಾಧಿಸಿದ ಸಾಧನೆಯನ್ನೂ ಮಾಡಿತು. ಇದೀಗೆ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಮೊತ್ತದ ಗುರಿಯನ್ನು ತಲುಪಿದ ಒಟ್ಟಾರೆ ನಾಲ್ಕನೇ ತಂಡ ಎಂಬ ದಾಖಲೆ ಹೈದರಾಬಾದ್ ಪಾಲಾಗಿದೆ.
ಸ್ಕೋರ ವಿವರ:
ಪಂಜಾಬ್ ಕಿಂಗ್ಸ್ 20 ಓವರುಗಳಲ್ಲಿ 6 ವಿಕೆಟ್ ಗೆ 245
ಶ್ರೇಯಸ್ ಅಯ್ಯರ 82 ( 36 ಎಸೆತ, 6 ಬೌಂಡರಿ, 6 ಸಿಕ್ಸರ್) , ಪ್ರಭ ಸಿಮ್ರನ್ 42 ( 23 ಎಸೆತ, 7 ಬೌಂಡರಿ, 1 ಸಿಕ್ಸರ್)
ಪ್ರಿಯಾನ್ಸ್ ಆರ್ಯ 36 ( 13 ಎಸೆತ, 2 ಬೌಂಡರಿ, 4 ಸಿಕ್ಸರ್ ) ಹರ್ಷಲ್ ಪಟೇಲ್ 42 ಕ್ಕೆ 4)
ಸನ್ ರೈಸ್ ಹೈದರಾಬಾದ್ 18.3 ಓವರುಗಳಲ್ಲಿ 2 ವಿಕೆಟ್ ಗೆ 247
ಅಭಿಷೇಕ ಶರ್ಮಾ 141 ( 55 ಎಸೆತ, 14 ಬೌಂಡರಿ, 10 ಸಿಕ್ಸರ್) ಟ್ರೆವರ್ಸ್ ಹೆಡ್ 66 ( 37 ಎಸೆತ, 9 ಬೌಂಡರಿ, 3 ಸಿಕ್ಸರ್ )
ಪಂದ್ಯ ಶ್ರೇಷ್ಠ: ಅಭಿಷೇಕ ಶರ್ಮಾ