ಬೆಂಗಳೂರು: ಬಲಿಷ್ಠ ತಂಡಗಳಾದ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಲ್ಲಿ ನಡೆಯುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 34 ನೇ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಸಾಯಂಕಾಲ 7:30 ರಿಂದ ನಡೆಯುವ ಪಂದ್ಯದಲ್ಲಿ ಎರಡು ಪ್ರಬಲ ತಂಡಗಳ ಹೋರಾಟ ಕದನ ಕುತೂಹಲ ಮೂಡಿಸಿದೆ. ಸದ್ಯ ಪಾಯಿಂಟ್ ಪಟ್ಟಿಯಲ್ಲಿ ತಲಾ 8 ಅಂಕಗಳನ್ನು ಪಡೆದಿರುವ ಉಭಯ ತಂಡಗಳು ಬಲಾಢ್ಯ ಆಟಗಾರರನ್ನು ಹೊಂದಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರನ್ ಸರಾಸರಿ ಆಧಾರದ ಮೇಲೆ 3 ನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ನಾಲ್ಕನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಬಲಾಢ್ಯವಾಗಿದ್ದು, ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.