Ad imageAd image
- Advertisement -  - Advertisement -  - Advertisement - 

ಪುರಾಣ ಪ್ರವಚನ ಮಂಗಲೋತ್ಸವದ ನಿಮಿತ್ತ ಶರಣಬಸವೇಶ್ವರ , ಲಿಂಗ ರುದ್ರಮುನಿ ಶಿವಯೋಗಿಗಳವರ ಭಾವಚಿತ್ರಗಳು, ಕುಂಭೋತ್ಸವದ ಅದ್ದೂರಿ ಮೆರವಣಿಗೆ.

Bharath Vaibhav
ಪುರಾಣ ಪ್ರವಚನ ಮಂಗಲೋತ್ಸವದ ನಿಮಿತ್ತ ಶರಣಬಸವೇಶ್ವರ , ಲಿಂಗ ರುದ್ರಮುನಿ ಶಿವಯೋಗಿಗಳವರ ಭಾವಚಿತ್ರಗಳು, ಕುಂಭೋತ್ಸವದ ಅದ್ದೂರಿ ಮೆರವಣಿಗೆ.
WhatsApp Group Join Now
Telegram Group Join Now

ಕಂದಗಲ್:-ಇಲ್ಲಿನ ರುದ್ರಸ್ವಾಮಿ ಮಠದಲ್ಲಿ ಡಾ. ಚನ್ನಮಲ್ಲ ಮಹಾ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಶ್ರಾವಣ ಮಾಸದ ನಿಮಿತ್ಯ ತಿಂಗಳ ಪರ್ಯಂತ ನಡೆದ ಮಹಾದಾಸೋಹಿ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಮಂಗಲದ ಅಂಗವಾಗಿ 225 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಡಾ ಶಂಕರರಾಜೇಂದ್ರ ಮಹಾಸ್ವಾಮಿಗಳು ಅಮೀನಗಡ ರವರ ಸಾನಿಧ್ಯದಲ್ಲಿ

ಹಾಗೂ ಕನಕಗಿರಿ ಡಾ. ಚನ್ನಮಲ್ಲ ಮಹಾಸ್ವಾಮಿಗಳವರು ಗಡಿಗೌಡಗಾಂವದ ಡಾ. ಶಾಂತವೀರ ಶಿವಾಚಾರ್ಯರು,ಮಹಾಲಿಂಗೇಶ್ವರ ಮಹಾಸ್ವಾಮಿಗಳು ಎದ್ದಲದೊಡ್ಡಿ ಹಾಗೂ ಅಂಕಲಿಮಠದ ಫಕಿರೇಶ್ವರ್ ಸ್ವಾಮೀಜಿಯವರ ಸನ್ನಿಧಿಯಲ್ಲಿ 225 ಕ್ಕೂ ಹೆಚ್ಚು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಉಡಿ ತುಂಬಿಕೊಂಡು ಕುಂಭ ಹೊರುವ ಮುತ್ತದೆಯರಿಗೆ ಕುಳಿತುಕೊಂಡ ಜಾಗದಲ್ಲೇ ಪ್ರಸಾದ ವಿತರಿಸಲಾಯಿತು.

ಪುರಾಣ ಪ್ರವಚನದ ಮಂಗಲ ನಿಮಿತ್ತ ಮಹಾದಾಸೋಹಿ ಕಲಬುರಗಿ ಶರಣಬಸವೇಶ್ವರರ ಹಾಗೂ ರುದ್ರಸ್ವಾಮಿ ಮಠದ ಮೂಲ ಕರ್ತೃ ಲಿಂಗ ರುದ್ರ ಶಿವಯೋಗಿಗಳವರ ಭಾವ ಚಿತ್ರಗಳ ಮೆರವಣಿಗೆಗೆ ಶ್ರೀಗಳವರಿಂದ ಚಾಲನೆ ದೊರೆಯಿತು ಈ ಸಂದರ್ಭದಲ್ಲಿ ಅಮೀನಗಡದ ಶ್ರೀ ಶಂಕರರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ ಉಡಿತುಂಬುವ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಯುವಪೀಳಿಗೆಯಲ್ಲಿ ಸಂಸ್ಕೃತಿ-ಸಂಸ್ಕಾರ ಮತ್ತಷ್ಟು ಬೆಳೆಯಲಿದೆ ಅಂತರಂಗದ ಮುಗ್ಧತೆ ಅರಿವಿನ ಪ್ರಬುದ್ಧತೆ ಆಚರಣೆಯ ಬದ್ಧತೆಯ ಜಾಗೃತಿ ಮೂಡಿಸುವುದೇ ಶ್ರಾವಣ ಪ್ರವಚನದ ಮಹೋದ್ದೆಶವಾಗಿದ್ದು ಬದುಕಿನಲ್ಲಿ ಭಕ್ತಿಯ ಮಾರ್ಗ ಅನುಸರಿಸಿ ದೇವರು ಮೆಚ್ಚುವಂತ ಕಾರ್ಯ ಮಾಡಬೇಕೆಂದು ಯುವಕರಿಗೆ ಕರೆಕೊಟ್ಟರು.

ಪುರಾಣ ಮಂಗಲೋತ್ಸವದ ನಿಮಿತ್ತ ನಸುಕಿನ ಜಾವ ರುದ್ರಸ್ವಾಮಿ ಮಠದಲ್ಲಿರುವ ಶ್ರೀಮಠದ ಮೂಲ ಪುರುಷ ಲಿಂಗ ರುದ್ರ ಶಿವಯೋಗಿಗಳವರ ಕರ್ತೃಗದ್ದುಗೆಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಮಂಗಳಾರತಿ ಸೇರಿದಂತೆ ಧಾರ್ಮಿಕ ಪದ್ಧತಿಗಳು ನಡೆದವು
ಮಹಾದಾಸೋಹಿ ಕಲಬುರ್ಗಿ ಶರಣಬಸವೇಶ್ವರ ಹಾಗೂ ಲಿಂಗ ರುದ್ರ ಶಿವಯೋಗಿಗಳವರ ಭಾವಚಿತ್ರಗಳ ಮೆರವಣಿಗೆ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿತು

ಮೆರವಣಿಗೆಯಲ್ಲಿ 225 ಕ್ಕೂ ಹೆಚ್ಚು ಮಹಿಳೆಯರಿಂದ ಕುಂಭಗಳ ಮೆರವಣಿಗೆ ನೂರಾರು ಮಹಿಳೆಯರ ಕಳಸದಾರುತಿ ಜೊತೆಗೆ ಭಾರೀ ಜಯಘೋಷ ದೊಂದಿಗೆ ಭಜನೆ ಕರಡಿ ಮಜಲು ಬ್ಯಾಂಡ್ ಹಾಗೂ ಡೊಳ್ಳು ಸೇರಿದಂತೆ ಹಲವು ವಾದ್ಯಮೇಳಗಳು ಮೆರವಣಿಗೆಗೆ ಮೆರಗು ನೀಡಿದವು ಮೆರವಣಿಗೆಗೆ ಮುಖ್ಯ ಬಜಾರ್ ಕೆಳಗಲ ಓಣಿ ಕೋರವಾರ ಅಗಸಿ ಪಾತಪ್ಪನ ಕಟ್ಟಿ ಕುರುಬರಪೇಟೆ ನಾಡಗೌಡರ ಮನೆಯಿಂದ ಚೌಡೇಶ್ವರಿ ದೇವಸ್ಥಾನದಿಂದ ದೇವಿ ಮಠ ನೇಕಾರ ಕಾಲೋನಿ ಈಶ್ವರ ಗುಡಿಯಿಂದ ಸಂತೆಬಜಾರಕ್ಕೆ ಬಂದು ಅಲ್ಲಿಂದ ರುದ್ರಸ್ವಾಮಿ ಮಠ ತಲುಪಿತು ಸುಮಾರು 3 ಗಂಟೆಗೂ ಅಧಿಕ ಕಾಲ ನಡೆದ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು ಮೆರವಣಿಗೆ  ಮಂಗಲದ ನಂತರ ಮಹಾದಾಸೋಹ ಜರುಗಿತು.ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಹಸ್ರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!