ಬಹುತೇಕ ಜನರಿಗೆ ಉಪಹಾರಗಳಲ್ಲಿ ಪೂರಿ ಒಂದು ಅತ್ಯಂತ ಪ್ರಿಯವಾಗಿದೆ. ಕೆಲವು ಜನರು ಪೂರಿಯನ್ನು ಕೇವಲ ಉಪಹಾರಕ್ಕೆ ಮಾತ್ರವಲ್ಲದೇ ಊಟದಲ್ಲೂ ಸೇವನೆ ಮಾಡುತ್ತಾರೆ. ಹಲವರ ಇಷ್ಟದ ಆಹಾರವಾಗಿರುವ ಪೂರಿಗಳನ್ನು ಎಣ್ಣೆಯಲ್ಲಿ ಫ್ರೈ ಮಾಡಲಾಗುತ್ತದೆ ಎಂಬುದು ಗೊತ್ತಿದೆ. ಆದರೂ ಕೂಡ ಪ್ರತಿಯೊಬ್ಬರ ಮನೆಯಲ್ಲಿ ವಿವಿಧ ರೀತಿಯ ಪೂರಿಗಳನ್ನು ತಯಾರಿಸಲಾಗುತ್ತದೆ.
ಈ ಪೂರಿಗಳಲ್ಲೂ ವಿವಿಧ ಪ್ರಕಾರಗಳಿವೆ. ಪ್ರಮುಖವಾಗಿ ಮೈದಾ ಪೂರಿ, ಗೋಧಿ ಪೂರಿ, ಮಸಾಲ ಪೂರಿ, ಬೀಟ್‌ರೂಟ್ ಪೂರಿ, ರವೆ ಪೂರಿ ಹೀಗೆ ಹಲವು ರೀತಿಯ ಪೂರಿಗಳಿವೆ. ಇವುಗಳ ಜೊತೆಗೆ ವಿಶೇಷವಾದ ತೆಂಗಿನಕಾಯಿ ತುರಿಯಿಂದ ರುಚಿಕರವಾದ ಪೂರಿಗಳನ್ನು ಸಿದ್ಧಪಡಿಸಬಹುದು. ನಿಮ್ಮ ಮನೆಯಲ್ಲಿ ದೊರೆಯುವ ಕೆಲವು ಸಾಮಗ್ರಿಗಳಿಂದ ರುಚಿಕರವಾದ ತೆಂಗಿನಕಾಯಿ ಪೂರಿ ರೆಸಿಪಿಯನ್ನು ಸುಲಭವಾಗಿ ತಯಾರಿಸಬಹುದು. ಎಣ್ಣೆ ಹೀರಿಕೊಳ್ಳದಂತೆ ಈ ಪೂರಿಗಳನ್ನು ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡ್ತೇವಿ. ತೈಲ ಮುಕ್ತ ಹಾಗೂ ಆರೋಗ್ಯಕ್ಕೆ ಯಾವುದೇ ಹಾನಿ ಉಂಟು ಮಾಡದ ಪೂರಿ ಮಾಡಬಹುದು.