2 ಬಾರಿಯ ಒಲಿಂಪಿಕ್ ಚಾಂಪಿಯನ್, ಮಾಜಿ ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್, ವಿಶ್ವ ನಂ.1 ಶಟ್ಲರ್ ಪಿವಿ ಸಿಂಧು ಅವರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇದೇ ಡಿ.22 ರಂದು ಹಸೆಮಣೆ ಏರಲಿದ್ದಾರೆ.
ಭಾನುವಾರ ನಡೆದ ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಚೀನಾದ ವು ಲುವೊ ಯು ಅವರನ್ನು ಸಿಂಧು ಮಣಿಸಿದ್ದರು.ಈ ಮೂಲಕ ಪ್ರಸಕ್ತ ವರ್ಷದ ಅಂತ್ಯದಲ್ಲಿ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಲಯಕ್ಕೆ ಮರಳಿದ್ದರು.
ಇದರ ಬೆನ್ನಲ್ಲೇ ಸಿಂಧು ಅವರ ಮದುವೆ ದಿನಾಂಕ ಬಹಿರಂಗವಾಗಿದೆ. ಡಿಸೆಂಬರ್ 20 ರಿಂದ ವಿವಾಹ ಸಮಾರಂಭ ಆರಂಭವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಡಿಸೆಂಬರ್ ಮೂರನೇ ವಾರ ಪೂರ್ತಿ ಬ್ಯಾಡ್ಮಿಂಟನ್ ತಾರೆಯರ ಮನೆಯಲ್ಲಿ ವಿವಾಹ ಸಂಬಂಧ ಕಾರ್ಯಕ್ರಮಗಳು ನಡೆಯಲಿವೆ.
ಡಿಸೆಂಬರ್ 22ರಂದು ಉದಯಪುರದಲ್ಲಿ ಪಾಸಿಡೆಕ್ಸ್ ಟೆಕ್ನಾಲಜೀಸ್ ನಲ್ಲಿ ಕಾರ್ಯಕಾರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ವೆಂಕಟ ದತ್ತ ಸಾಯಿ ಅವರೊಂದಿಗೆ ಹಸೆಮಣೆ ಎರಲಿದ್ದು, ಬಳಿಕ 24ರಂದು ಹೈದರಾಬಾದ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಸಿಂಧು ಅವರ ತಂದೆ ಪಿವಿ ರಾಮಣ್ಣ ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಡಿಸೆಂಬರ್ 22 ರಂದು ರಾಜಸ್ಥಾನದ ‘ಲೇಕ್ ಸಿಟಿ’ ಉದಯಪುರದಲ್ಲಿ ವಿವಾಹ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.