Ad imageAd image

ಕೂಡು ರಸ್ತೆ ಸಂಪರ್ಕ ಕಲ್ಪಿಸುವಂತೆ ಸಚಿವರಿಗೆ ಮನವಿ

Bharath Vaibhav
ಕೂಡು ರಸ್ತೆ ಸಂಪರ್ಕ ಕಲ್ಪಿಸುವಂತೆ ಸಚಿವರಿಗೆ ಮನವಿ
WhatsApp Group Join Now
Telegram Group Join Now

ಚಿಂಚೋಳಿ : ತಾಲೂಕಿನ ಸೇಡಂ ವಿಧಾನಸಭಾ ಮತಕ್ಷೇತ್ರಕ್ಕೊಳಪಡುವ ಬೇಡಕಪಳ್ಳಿ ಗ್ರಾಮದಿಂದ ರಾಮತೀರ್ಥ ಮತ್ತು ಯಾಕಪೂರ ಗ್ರಾಮಗಳಿಗೆ ಕೂಡು ರಸ್ತೆ ಸಂಪರ್ಕ ಕಲ್ಪಿಸಬೇಕು ಮತ್ತು ಸುಲೇಪೇಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ವೈದ್ಯಾಧಿಕಾರಿಗಳ ಹುದ್ದೆಯನ್ನು ಕೂಡಲೆ ಭರ್ತಿಮಾಡಬೇಕು.ಸುಲೇಪೇಟ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆರಿಸಬೇಕು. ರಾಯಕೊಡ.ಗಡಿಕೇಶ್ವಾರ ಸುಲೇಪೇಟ ಮತ್ತು ಗಡಿಕೇಶ್ವಾರ ಸರಕಾರಿ ಬಾಲಕರ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು.ಸುಲೇಪೇಟ ಸರಕಾರಿ ಕನ್ಯಾ ಪ್ರೌಡ ಶಾಲೆ ಮತ್ತು ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಮಳೆಗಾಲದಲ್ಲಿ ರೈತ ಸಂಪರ್ಕ ಕೇಂದ್ರದ ಹಿಂದುಗಡೆ ನಿಲ್ಲುವ ನೀರಿನಿಂದ ತರಗತಿಗೆ ಹೋಗಲು ಸಮಸ್ಯೆಯಾಗುತ್ತಿರುವುದರಿಂದ ಈ ಸಮಸ್ಯೆ ಬಗಹರಿಸಬೇಕೆಂದು ಪೆಂಚನಪಳ್ಳಿ ಮತ್ತು ಬೇಡಕಪಳ್ಳಿ ಗ್ರಾಮದ ರಸ್ತೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಾಲ್ಯಾಭಿವೃದ್ದಿ ಸಚಿವರಾದ ಡಾ ಶರಣಪ್ರಕಾಶ್ ಪಾಟೀಲರಿಗೆ ಭಾರತ ಮುಕ್ತಿ ಮೋರ್ಚಾ ಸಂಘಟನೆ ಮುಖಂಡರು ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಮಾರುತಿ ಗಂಜಗಿರಿ ರೇವಣಸಿದ್ದಪ್ಪ ಸುಬೇದಾರ್ ಮೋಹನ ಐನಾಪೂರ ಹರೀಶ್ ದೇಗಲ್ಮಡಿ ರಸುಲ್ ಸುಲೇಪೇಟ ಮುಂತಾದವರು ಉಪಸ್ಥಿತರಿದ್ದರು.

ವರದಿ : ಹಣಮಂತ ಕುಡಹಳ್ಳಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!