ಟ್ರೆನಿಡಾಡ್ ( ವೆಸ್ಟ್ ಇಂಡೀಸ್ ): ಪ್ರವಾಸಿ ಪಾಕಿಸ್ತಾನ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಐದು ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಇಲ್ಲಿನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ನಿಗದಿತ 50 ಓವರುಗಳನ್ನು ಪೂರೈಸದೇ 49 ಓವರುಗಳಲ್ಲಿ 280 ರನ್ ಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಇದಕ್ಕೆ ಪ್ರತಿಯಾಗಿ ಆಡಿದ ಪಾಕಿಸ್ತಾನ ಕ್ರಿಕೆಟ್ ತಂಡ 48.5 ಓವರುಗಳಲ್ಲಿ 5 ವಿಕೆಟ್ ಗೆ 284 ರನ್ ಗಳಿಸಿ ಜಯದ ನಗೆ ಬೀರಿತು.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ 49 ಓವರುಗಳಲ್ಲಿ 280
ಲೆವಿಸ್ 60 (62 ಎಸೆತ, 5 ಬೌಂಡರಿ, 3 ಸಿಕ್ಸರ್)
ಸಾಯಿ ಹೋಪ್ 55 ( 77 ಎಸೆತ, 4 ಬೌಂಡರಿ), ರೋಸ್ಟೋನ್ ಚೇಸ್ 53 ( 54 ಎಸೆತ, 4 ಬೌಂಡರಿ, 2 ಸಿಕ್ಸರ್)
ಮೋಟಿ 31 ( 18 ಎಸೆತ, 3 ಬೌಂಡರಿ, 2 ಸಿಕ್ಸರ್) ಶಾಹೀನ್ ಅಫ್ರಿದಿ 51 ಕ್ಕೆ 4), ನಸೀಮ್ ಶಾ 55 ಕ್ಕೆ 3)
ಪಾಕಿಸ್ತಾನ 48.5 ಓವರುಗಳಲ್ಲಿ 5 ವಿಕೆಟ್ ಗೆ 284
ಹಸನ್ ನವಾಜ್ 63 ( 54 ಎಸೆತ, 5 ಬೌಂಡರಿ, 3 ಸಿಕ್ಸರ್) ಹಸನ್ ತಲಾಟ್ 41 ( 37 ಎಸೆತ, 4 ಬೌಂಡರಿ, 1 ಸಿಕ್ಸರ್)
ಮೊಹ್ಮದ್ ರಿಜ್ವಾನ್ 53 ( 69 ಎಸೆತ, 4 ಬೌಂಡರಿ) ಬಾಬರ್ ಆಜಮ್ 47 ( 64 ಎಸೆತ, 5 ಬೌಂಡರಿ, 1 ಸಿಕ್ಸರ್)
ಪಂದ್ಯ ಶ್ರೇಷ್ಠ: ಹಸನ್ ನವಾಜ್




