ಪಾಷಾಪುರ : ಗುರು ಶಿಷ್ಯರ ಸಂಬಂಧ ಅಜರಾಮರವಾಗಿರುತ್ತದೆ ಎಂದು ನಿವೃತ್ತ ಶಿಕ್ಷಕ ಪುಂಡಲಿಕ ಗೋರ್ಪಡೆ ತಿಳಿಸಿದರು.
ಈಚೆಗೆ ಹುಕ್ಕೇರಿ ತಾಲೂಕಿನ ಪಾಷಾಪುರದ ಮಾಧುರಿ ಕಲ್ಯಾಣ ಮಂಟಪದಲ್ಲಿ ಪತ್ತೆ ಖಾನ್ ದೇಸಾಯಿ ಪ್ರೌಢಶಾಲೆಯ 1998-99 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸಮಧುರ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ತಂದೆ-ತಾಯಿಯರ ಬಳಿಕ ಗುರುಗಳು ಶ್ರೇಯಸ್ಸು ಬಯಸುತ್ತಾರೆ. ಸ್ನೇಹ ಸಮ್ಮೇಳನದಂತಹ ಕಾರ್ಯಕ್ರಮಗಳು ಹಳೆ ನೆನಪುಗಳನ್ನು ನೆನೆಯಲು ವೇದಿಕೆಯಾಗಿವೆ ಎಂದರು.
ಬಳಿಕ ಸರಕಾರಿ ಸರಸ್ವತಿ ಬಾಲಕಿಯರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಎನ್.ಬಿ.ಶಿರಶ್ಯಾಡ ಅವರು ಮಾತನಾಡಿದರು.
ಈ ವೇಳೆ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಎಲ್ಲಾ ಗುರುಗಳಿಗೆ ಗುರುಮಾತೆಯರಿಗೆ 98- 99ನೇ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಗೌರವ ಅಭಿನಂದನೆಯನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಟಿ.ಹಸರಂಗಿ, ಎಸ್.ಜಿ.ಸಿಲೆದಾರ್,
ಹಳೆ ವಿದ್ಯಾರ್ಥಿಗಳಾದ ಬಸವರಾಜ ಕೋಟಗಿ, ವಾಣಿಜ್ಯಶಾಸ್ತ್ರದ ಉಪನ್ಯಾಸಕ ಲಗಮಪ್ಪ ಸನದಿ, ಶಕೀಲ್ ನದಾಫ್, ಬಾಳಪ್ಪ ಗೋಡಗೇರಿ ಬಸವರಾಜ್ ಬೆನ್ನಿ ಸುವರ್ಣ ಕಂಬಾರ್ , ಭಾಗ್ಯಶ್ರೀ ಬಡಾಳೆ, ಗೀತಾ ರಾಣಿ ಸೇರಿದಂತೆ ಇತರರಿದ್ದರು. ಅಧ್ಯಾಪಕ ಪ್ರೊ. ನೀಲಕಂಠ ಭೂಮಣ್ಣವರ ನಿರೂಪಿಸಿದರು.




