ನಿಪ್ಪಾಣಿ : ಸನ್ 2002ರಲ್ಲಿ ದಿವಂಗತ ಬಿ ಆರ್ ಪಾಟೀಲ್ ಎ ಆರ್ ಪಾಟೀಲ್ ಎಸ್ ಎಸ್ ಪಾಟೀಲ್ ಸಾಂಗ್ಲಿ ಹಾಗೂ ಮಾಜಿ ಶಾಸಕ ಅಣ್ಣಾ ಬಾಳಾಜಿ ಬೇಡಗೆಯವರ ಪ್ರೇರಣೆಯಿಂದ ಹುಟ್ಟಿಕೊಂಡ ಆಚಾರ್ಯ ದೇಶಭೂಷಣ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಇಂದು ಹೆಮ್ಮರವಾಗಿ ಬೆಳೆದಿದ್ದು ಕಾಲೇಜು ಜೊತೆಗೆ ಆಸ್ಪತ್ರೆ ಪ್ರಾರಂಭಿಸಿ ಇಲ್ಲಿಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ವೈದ್ಯಾಧಿಕಾರಿಗಳಾಗುವವರೆಗೆ ಅಡಿಗಲ್ಲಾಗಿದೆ. ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನ್ಯಾಯವಾದಿ ಪಿ ಆರ್ ಪಾಟೀಲ್ ತಿಳಿಸಿದರು. ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ A D A.M ಕಾಲೇಜಿನಲ್ಲಿ ಶನಿವಾರ ನಡೆದ ಸನ್ 2024/25ನೇ ಸಾಲಿನ BAMS ವಿದ್ಯಾರ್ಥಿಗಳ ಪ್ರವೇಶ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಾರಂಭದಲ್ಲಿ ಪ್ರಾಚಾರ್ಯ ಡಾಕ್ಟರ ಧೀರಜ್ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ “ಆಚಾರ್ಯ ದೇಶಭೂಷಣ ಮುನಿಗಳ ಪ್ರೇರಣೆಯಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದಗೋಸ್ಕರ ಮೆಡಿಕಲ್ ಕಾಲೇಜು ಪ್ರಾರಂಭಿಸಲಾಗಿದ್ದು ಇಂದು ಕರ್ನಾಟಕ ಮಹಾರಾಷ್ಟ್ರದಿಂದ ನೂರಾರು ವಿದ್ಯಾರ್ಥಿಗಳು ದರ್ಜೆಯುತ ಶಿಕ್ಷಣ ಪಡೆದುಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ನಟಿ ಶಿಕ್ಷಣ ಸಂಸ್ಥೆಯ ಸಾಂಗಲಿ ಮುಖ್ಯ ಕಾರ್ಯಾಲಯದ ಅಧ್ಯಕ್ಷ ಶಾಂತಿನಾಥ್ ಕಾಂತೆ ಮಾತನಾಡಿದರು ಜೆಎ ಪಾಟೀಲ್ ಅತಿಥಿಗಳನ್ನು ಪರಿಚಯಿಸಿದರು ವೇದಿಕೆಯಲ್ಲಿಯ ಗಣ್ಯರಿಂದ ಮೊದಲು ಧನ್ವಂತರಿ ಪೂಜೆ ದೀಪ ಪ್ರಜ್ವಲನೆ ನಡೆಯಿತು ಸಮಾರಂಭದಲ್ಲಿ ಸನ್ 2024 25 ನೇ ಸಾಲಿಗಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿಯ ಗಣ್ಯರಿಂದ ಪ್ರವೇಶಪತ್ರ ನೀಡಿ ಸ್ವಾಗತಿಸಲಾಯಿತು. ಸಮಾರಂಭದಲ್ಲಿ ಸುಹಾಸ ಪಾಟೀಲ ಪ್ರಶಾಂತ ಪಾಟೀಲ ಪಾಸ ಗೌಡ ಪಾಟೀಲ ಇಂದ್ರಜಿತ್ ಪಾಟೀಲ ಉದಯ್ ಪಾಟೀಲ ಶಾಂತಿನಾಥ್ ಪಾಟೀಲ ಡಾ. ಜೈಪ್ರಕಾಶ ಸಗರೆ, ಡಾ. ಸುಧೀರ ಕೋಳಿ, ಡಾ.ತೇಜಪಾಲ ಚೆಂಡಕೆ,ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಡಾ. ವೈಶಾಲಿ ಸ್ವಾಗತಿಸಿದರು, ಕುಮಾರಿ ದಿವ್ಯಶ್ರೀ,ಹಾಗೂ ಋತುಜಾ ನಿರೂಪಿಸಿ ಡಾ. ಸ್ನೇಹಾ ಕೇಟಕಾಳೆ ವಂದಿಸಿದರು.
ವರದಿ: ಮಹಾವೀರ ಚಿಂಚಣೆ