ಮೊಳಕಾಲ್ಮೂರು ಅಧಿಕಾರಿಗಳ ನಿರ್ಲಕ್ಷ..
ಕಾಲುವೆಯ ಕಲ್ಲು ಮಣ್ಣು ಹೂಳನ್ನು ತೆಗೆದು ರಸ್ತೆಗೆ ಹಾಕಿದ ರೈತ…
ರಸ್ತೆ ಸಂಚಾರ ಅಸ್ತವ್ಯಸ್ತ..ವಾಹನ ಸವಾರರ ಪರದಾಟ…
ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಸ್ತೆಯ ಗುಂಡಿಗಳು ..
ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ … ವೀರಾರೆಡ್ಡಿ ಎನ್ನುವ ರೈತನ ತೋಟದ ಬದುವಿಗೆ …ರಾಂಪುರ ಹಾಗೂ ವಿಠಲಪುರಕ್ಕೆ ಹೋಗುವ ಮುಖ್ಯ ರಸ್ತೆ ಹೊಂದಿಕೊಂಡಿದ್ದು…ಈ ರಸ್ತೆಯ ಪಕ್ಕದಲ್ಲಿಯೇ ದೇವಸಮುದ್ರ ಕೆರೆಯ ಕೋಡಿ ಹಾಗೂ ಕೆರೆಯ ನೀರು ಹರಿಯುವ ದೊಡ್ಡ ಕಾಲುವೆ ಇದೆ.. ಪ್ರತಿ ವರ್ಷವೂ ಈ ಕಾಲುವೆಯಲ್ಲಿ ಹುಲ್ಲು ಹಾಗೂ ಕಲ್ಲು ಮಣ್ಣುಊಳು ತುಂಬಿ ಸರಾಗವಾಗಿ ನೀರು ಹರಿಯದೆ ತೋಟಕ್ಕೆ ನುಗ್ಗಿ ಬೆಳೆ ನಷ್ಟವಾಗುತ್ತಿದೆ ಎಂದು ತೋಟದ ಮಾಲೀಕರಾದ ವೀರರೆಡ್ಡಿ ಹೇಳುತ್ತಾರೆ
ಈ ಸಂದರ್ಭದಲ್ಲಿ ತೋಟದ ಮಾಲೀಕ ವೀರಾರೆಡ್ಡಿ ಮಾತನಾಡಿ…
ಈ ಕಾಲುವೆಯಿಂದಾಗುವ ತೊಂದರೆಯನ್ನು ಪ್ರತಿವರ್ಷ ಅಧಿಕಾರಿಗಳ ಗಮನಕ್ಕೂ ತಂದರು ಪ್ರಯೋಜನವಾಗುತ್ತಿಲ್ಲ.. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಲಿ ..ಸಣ್ಣ ನೀರಾವರಿ ಅಧಿಕಾರಿಗಳಾಗಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾರೇ ಆಗಲಿ ಇದರ ಹೊಣೆಯನ್ನು ಓರುವುದಕ್ಕೆ ಸಿದ್ದರಿಲ್ಲ. ಪ್ರತಿ ವರ್ಷ ನಾನು ನನ್ನ ಸ್ವಂತ ದುಡಿಮೆಯಿಂದ ಸುಮಾರು 50 ರಿಂದ 60 ಸಾವಿರ ಖರ್ಚು ಮಾಡುತ್ತಿದ್ದೇನೆ .ಇದರಿಂದ ನನಗೆ ತುಂಬಾ ನಷ್ಟವಾಗಿದೆ. ಏನಾದರೂ ಒಂದು ಸಭಾಬು ಹೇಳಿ ಜಾರಿಕೊಳ್ಳುತ್ತಿರುವ ಅಧಿಕಾರಿಗಳ ಗಮನ ಸೆಳೆಯಲು ಕಾಲುವೆಯ ಹೂಳನ್ನು ತೆಗೆದು ರಸ್ತೆಗೆ ಹಾಕಿದ್ದೇನೆ.. ಈಗಲಾದರೂ ಈ ಸಮಸ್ಯೆಗೆ ಪರಿಹಾರ ಸೂಚಿಸಬೇಕೆಂದು ಮನವಿ ಮಾಡಿದರು. ರೈತರು ಈ ದೇಶದ ಬೆನ್ನೆಲುಬು ಅಂತ ಹೇಳುವ ಇಂತಹ ಅಧಿಕಾರಿಗಳಿಗೆ ಏನು ಹೇಳಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ಹಳಲನ್ನು ತೋಡಿಕೊಂಡರು.

ಈ ಕಿರಿದಾಗಿರುವ ರಸ್ತೆಗೆ ಕಾಲುವೆಯ ಹೂಳನ್ನು ಹಾಕಿರುವ ಪರಿಣಾಮ ರಸ್ತೆ ಮತ್ತಷ್ಟು ಚಿಕ್ಕದಾಗಿದ್ದು…ಇದರ ಜೊತೆಗೆ ಮರಳು ಲಾರಿಗಳ ಓಡಾಟದಿಂದ ದೊಡ್ಡ ಗಾತ್ರದಲ್ಲಿ ಗುಂಡಿಗಳು ಬಿದ್ದು ..ವಾಹನ ಸವಾರರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು ಸಂಚರಿಸುವ ದುಸ್ಥಿತಿ ಎದುರಾಗಿದೆ.. ಅಪಾಯ ಎದುರಾಗುವ ಮೊದಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ…
ವರದಿ: ಪಿಎಂ ಗಂಗಾಧರ




