ಚನ್ನಮ್ಮನ ಕಿತ್ತೂರು : ಇತಿಹಾಸಿಕ ನಾಡು, ಹೋರಾಟ ಮಾಡಿದ ವೀರರ ಭೂಮಿ, ಇತಿಹಾಸದ ಪುಟ ಪುಟದಲ್ಲಿ ತನ್ನದೇ ಆದ ಛಾಪು ಮೂಡಿಸಿದ ವೀರ ರಾಣಿ ಕಿತ್ತೂರ ಚನ್ನಮ್ಮನ ನಾಡಿನಲ್ಲಿ ಇತ್ತೀಚಿಗೆ ಇಲ್ಲಿ ಹಲವಾರು ಸಾಧಕರಿಗೆ ಸಾಧನೆ ಮಾಡಲು ತರಬೇತಿ ಕೇಂದ್ರಗಳು, ಸೇನಾ ತರಬೇತಿ, ದೈಹಿಕ ತರಬೇತಿ ಕೇಂದ್ರಗಳು, ಪೊಲೀಸ್ ಇನ್ಸ್ಪೆಕ್ಟರ್ ತರಬೇತಿ ಕೇಂದ್ರಗಳು ತಲೆಯೇಟ್ಟುತ್ತಿವೆ, ಅದರಲ್ಲಿ ಇಂದು ಕಿತ್ತೂರನಲ್ಲಿ ಕನ್ನಡ ಪರ ಸಂಘಟನೆಯಾದ ರಾಣಿ ಚನ್ನಮ್ಮ ನವಭಾರತ ಸೇನೆ ವತಿಯಿಂದ ನೌಕರಿಗಾಗಿ ಪರೀತಪಿಸುವ ವಿದ್ಯಾಭ್ಯಾಸ ಮುಗಿಸಿ ನಿರುದ್ಯೋಗಿ ಯುವಕರಿಗೆ ರಾಣಿ ಚನ್ನಮ್ಮ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಲಾಯಿತು.

ಇದರ ಗೌರವ ರಾಣಿ ಚನ್ನಮ್ಮ ನವಭಾರತ ಸೇನೆಯ ಯುವ ರಾಜ್ಯ ಕಾರ್ಯದರ್ಶಿ ಬಸವರಾಜ ಭೀಮರಾಣಿ, ರಾಜ್ಯ ಸಂಚಾಲಕರಾದ ಶ್ರೀ ಜಗದೀಶ ಕಡೋಲಿ ಯವರು ರಾಣಿ ಚನ್ನಮ್ಮ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಿದರು. ಇದರ ಉದ್ಘಾಟನೆಯನ್ನು ಕಿತ್ತೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ರಾಣಿ ಚನ್ನಮ್ಮ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಉದ್ಘಾಟನಾ ಸಮಾರಂಭ ಜರುಗಿತ್ತು.
ಪಿಎಸ್ಐ, ಎಸ್ ಎಸ್, ಕೆಎಎಸ್ , ಐಎಸ್ ಎಸ್ , ಜೆಡಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪ್ರತಿ ತಿಂಗಳುಗಳಲ್ಲಿ ನಾಲ್ಕನೇ ರವಿವಾರ ಕಿತ್ತೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆಸಲಾಗುವುದು.

ಪಟ್ಟಣ್ಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ ಫ್ ಜಕಾತಿ, ಹಾಗೂ ನಿವೃತ್ತ ಸೇನಾಧಿಕಾರಿಗಳು ಹಾಗೂ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ಸಂಸ್ಥಾಪಕರಾದ ಪರವೇಜ್ ಹವಾಲ್ದಾರ್, ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಹಾಗೂ ನಿವೃತ್ತ ಸೈನಿಕರಾದ ರವೀಂದ್ರ ಡಿ. ಜಾಧವ, ಶಾಸಕರ ಮತಕ್ಷೇತ್ರ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಆರ್ ಜಿ ಮುಂದೆವಾಡಿ, ಮತ್ತು ಎಂ ವಾಯ್ ಕಡಕೋಳ, ಅವರು ಮಾತನಾಡಿದರು
ವಿಧ್ಯಾರ್ಥಿಗಳು, ವಿಧ್ಯಾರ್ಥಿನಿಯರು, ಗ್ರಂಥಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.




