ಬೆಳಗಾವಿ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತು ಅವಾಚ್ಯ ಪದ ಬಳಸಿದ ಹಿನ್ನೆಲೆಯಲ್ಲಿ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರನ್ನು ನಿನ್ನೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಬಂಧಿಸಿದ್ದರು.
ಇಂದು ಬೆಳಗಾವಿಯ ಜೆಎಂಎಫ್‌ಸಿ ಕೋರ್ಟಿಗೆ ಅವರನ್ನು ಹಾಜರೂಪಡಿಸಿದ್ದು, ಜಡ್ಜ್ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿ ಆದೇಶಿಸಿದರು.
ಈ ವೇಳೆ ಕೋರ್ಟ್ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಈ ಒಂದು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ನೋಟಿಸ್ ನೀಡಿ ಕಾನೂನು ಪ್ರಕಾರ ಎಂಎಲ್ಸಿ ಸಿಟಿ ರವಿ ಅವರನ್ನು ಬಂಧಿಸಬೇಕು. ಆದರೆ ಸುವರ್ಣ ಸೌಧದಲ್ಲಿ ಇರುವಾಗಲೇ ಅವರನ್ನು ಏಕಾಏಕಿ ಪೊಲೀಸರು ಹೊತ್ತುಕೊಂಡು ಹೋಗಿದ್ದಾರೆ.
ನ್ಯಾಯಾಲಯ ಸಿಟಿ ರವಿ ಪರ ವಕೀಲರ ವಾದವನ್ನು ಆಲಿಸಿದೆ. ಮಧ್ಯಾಹ್ನ 3:00ಗೆ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಎಂ ಎಲ್ ಸಿ ಸಿಟಿ ರವಿ ಕೂಡ ಜೆಡ್ಸ್ ಮುಂದೆ ವಿವರಣೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು. ಪದೇ ಪದೇ ಪೊಲೀಸರಿಗೆ ಯಾಕೆ ಫೋನ್ ಕಾಲ್ ಮಾಡುತ್ತಿದ್ದರು? ಕರೆ ಮಾಡಿ ಎಲ್ಲಿಗೆ ಕರೆದುಕೊಂಡು ಹೋಗಬೇಕು ಎಂದು ಮಾನಿಟರ್ ಮಾಡುತ್ತಿದ್ದರು.
ಪೊಲೀಸರಿಗೆ ಯಾರ್ಯಾರು ಕರೆ ಮಾಡಿದ್ದಾರೆ ಎಂದು ಎಲ್ಲವೂ ಗೊತ್ತಾಗಬೇಕು ಸಿಟಿ ರವಿ ಬಂಧನ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಆಗಬೇಕು ಅದು ಬೆಳಗಾವಿಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಗ್ರಹಿಸಿದರು.