ಮಂಡ್ಯ : ರಾಜ್ಯದ ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾವಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ ಅಂತಾ ಖುಷಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರೇ, ಮುಡಾ ಹಗರಣ ನಿಮ್ಮ ಕಣ್ಣು ಮುಂದೆ ಬರುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ತಗ್ಗಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯಗೆ 14 ಸೈಟ್ ಬೇಕಿತ್ತಾ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯನ ಹುಂಡಿಯಲ್ಲಿ ಎಲ್ಲಾ ಆಸ್ತಿ ಇದೆ. 14 ಸೈಟ್ ಲೂಟಿ, ದಲಿತರ ಹಣವನ್ನು ನೀವು ನುಂಗಿದ್ದೀರಿ. ಇನ್ನೂ ನೀವಿನ್ನೂ ಲೂಟಿ ರಾಮಯ್ಯನೇ ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರ 1 ಲಕ್ಷ ಕೋಟಿ ರೂಪಾಯಿ ಸಾಲ ಮಾಡುತ್ತಿದೆ. ಜನರ ತಲೆ ಮೇಲೆ ಮತ್ತಷ್ಟು ತೆರಿಗೆ ಹಾಕ್ತಾರೆ ನೋಡಿ ಎಂದು ಆರೋಪಿಸಿರುವ ಅಶೋಕ್, ಉಪಚುನಾವಣೆಯಲ್ಲಿ ಬಿಜೆಪಿಗೆ ಒಳ್ಳೆಯ ಫಲಿತಾಂಶ ಬಂದಿಲ್ಲ ಎಂದರು.
ಇನ್ನು ಕಾಂಗ್ರೆಸ್ನವರು ಮೂರು ಕ್ಷೇತ್ರದಲ್ಲೂ ಗೆದ್ದಿದ್ದಾರೆ. ಕಾಂಟ್ರ್ಯಾಕ್ಟರ್ ಮತ್ತು ಅಧಿಕಾರಿಗಳು ಇವರನ್ನು ಗೆಲ್ಲಿಸಿದ್ದಾರೆ. 3 ಕ್ಷೇತ್ರಗಳಲ್ಲಿ ಗೆದ್ದ ಮಾತ್ರಕ್ಕೆ ತಕ-ತಕ ಎಂದು ಕುಣಿಯುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ನಾವು 18 ಸೀಟ್ ಗೆದ್ದಿದ್ದೇವೆ. ಬಿಜೆಪಿ ಸ್ಟೈಲೇ ಬೇರೆ ಎಂದು ಅಶೋಕ್ ಹೇಳಿದ್ದಾರೆ.