Ad imageAd image

ರಾಹುಲ್ ಗಾಂಧಿ ಇರುವ ಕಾರಣ ಕಾಂಗ್ರೆಸ್ ಗೆ ರಾಹುಕಾಲ ಬಂದಿದೆ. : ಆರ್ ಅಶೋಕ್

Bharath Vaibhav
ರಾಹುಲ್ ಗಾಂಧಿ ಇರುವ ಕಾರಣ ಕಾಂಗ್ರೆಸ್ ಗೆ ರಾಹುಕಾಲ ಬಂದಿದೆ. : ಆರ್ ಅಶೋಕ್
R ASHOK
WhatsApp Group Join Now
Telegram Group Join Now

ಕೋಲಾರ : ರಾಹುಲ್ ಗಾಂಧಿ ಇರುವ ಕಾರಣ ಕಾಂಗ್ರೆಸ್ ಗೆ ರಾಹುಕಾಲ ಬಂದಿದೆ. ಬೆಲೆ ಏರಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯಗೆ ಎರಡು ನಾಲಿಗೆಗಳು ಇವೆ.

ಮಾಡಲ್ಲ ಅಂತ ಹೇಳಿದ್ದನ್ನು ಈಗ ಮಾಡುತ್ತಿದ್ದಾರೆ ಮಾದಿತ್ತಿದರೆ ಸಿಎಂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುತ್ತಾರೆ.ಕೇಂದ್ರ ಸರ್ಕಾರ ಏನೋ ನಿಮ್ಮ ಅತ್ತೆ ಮನೆಯ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಕೋಲಾರದಲ್ಲಿ ಜಿಲ್ಲಾಡಳಿತ ಕಚೇರಿಯ ಬಳಿ ಜಿಲ್ಲಾ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ವಿದ್ಯುತ್ ಬೆಲೆ, ಡಿಸೇಲ್- ಪೆಟ್ರೋಲ್ ಬೆಲೆ, ಹಾಲಿನ ಬೆಲೆ, ಮದ್ಯದ ಬೆಲೆ, ಮುದ್ರಾಂಕ ನೋಂದಣಿ ಬೆಲೆಗಳನ್ನು ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಜೀವನವು ಆರ್ಥಿಕ ಸಂಕಷ್ಟದಲ್ಲಿರುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರವು ರಾಜ್ಯದ ಜನತೆಗೆ ಐದು ಗ್ಯಾರಂಟಿಗಳ ಮೂಲಕ ಭಾಗ್ಯಗಳನ್ನು ಒಂದು ಕೈಯಲ್ಲಿ ಕೊಟ್ಟು, ಪೆಟ್ರೋಲ್ – ಡೀಸೆಲ್, ಅಗತ್ಯ ವಸ್ತುಗಳ ಬೆಲೆಯೇರಿಸುವ ಮೂಲಕ ಮತ್ತೊಂದು ಕೈಯಿಂದ ಕಸಿದುಕೊಳ್ಳುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಒಂದು ವರ್ಷದೊಳಗೆ ಸಾರ್ವಜನಿಕರ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿ ರಾಜ್ಯವನ್ನೇ ಸಂಕಷ್ಟಕ್ಕೆ ತಳ್ಳಿದೆ, ಕೂಡಲೇ ಬೆಲೆಯೇರಿಕೆ ಮಾಡಿರುವ ದರಗಳನ್ನು ಹಿಂಪಡೆಯಬೇಕೆಂದು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಆಗ್ರಹಿಸಿದರು.

ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್‌ರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯರಿಗೆ ಮಾನ, ಮರ್ಯಾದೆ ಏನಾದರೂ ಇದ್ದಲ್ಲಿ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬರಲಿ ಎಂದರು.

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!