ಬೆಂಗಳೂರು : ರಾಜ್ಯದಲ್ಲಿ ‘ಗ್ಯಾರಂಟಿ’ ಕಾಂಗ್ರೆಸ್ ಕೈ ಹಿಡಿದಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ. ಲೋಕಸಭೆ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ ಆರ್ ಅಶೋಕ್ ಕರ್ನಾಟಕ ಫಲಿತಾಂಶವನ್ನ ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ , ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸರ್ಕಾರದಲ್ಲಿ 136 ಶಾಸಕರಿದ್ದಾರೆ.
ದುರಹಂಕಾರದಿಂದ ಆಡಳಿತ ನಡೆಸುತ್ತಿದ್ದರು. ಗ್ಯಾರಂಟಿ ಕೈ ಹಿಡಿದಿಲ್ಲ ಎಂದರು. ಕಾಂಗ್ರೆಸ್ ದುಡ್ಡು ಫಲ ನೀಡಿಲ್ಲ. ಡಿಕೆ ಸಹೋದರ ಸುರೇಶ್ ಅವರೇ ಸೋಲನ್ನಪ್ಪಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.