ಚಾಮರಾಜನಗರ: ತಾಲ್ಲೂಕಿನ ಮಸಣಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆರ್. ನಂಜಯ್ಯ, ಉಪಾಧ್ಯಕ್ಷರಾಗಿ ಬಸವಣ್ಣರವರು ಅವಿರೋಧ ಆಯ್ಕೆಯಾದರು.
ಮಸಣಪುರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಬುಧವಾರ ನಡೆದ ಅಧ್ಯಕ್ಷ ಸ್ಥಾನಕ್ಕೆ ಆರ್. ನಂಜಯ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಸವಣ್ಣ ನವರು ನಾಮಪತ್ರ ಸಲ್ಲಿಸಿದರು. ಇವರ ವಿರುದ್ಧ ಯಾರು ನಾಮಪತ್ರ ಸಲ್ಲಿಸಿಲ್ಲದ ಕಾರಣ ರಿಟರ್ನಿಂಗ್ ಅಧಿಕಾರಿ ಶಿಲ್ಪಶ್ರೀ.ಬಿ. ಎಸ್ ರವರು ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ನಂತರ ಸಂಘದ ನೂತನ ಅಧ್ಯಕ್ಷರು ನಂಜಯ್ಯ ಮತ್ತು ಉಪಾಧ್ಯಕ್ಷರು ಬಸವಣ್ಣ ಆಯ್ಕೆಗೆ ಸಹಕರಿಸಿದ ಎಲ್ಲಾರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಿವಕುಮಾರ್ ಹಾಗೂ ಮುಖಂಡರಾದ ಬೂದಂಬಳ್ಳಿ ಶಂಕರಪ್ಪ ಮಾತನಾಡಿದರು.
ಈ ಸಮಯದಲ್ಲಿ ನಿರ್ದೇಶಕರುಗಳಾದ ಶಿವಮ್ಮ ರೇವಣ್ಣ, ನಾಗರಾಜು, ನಂಜುಂಡಸ್ವಾಮಿ, ನಾಗರತ್ನ, ತಿಲಾಕವತಿ, ಪಾಪಣ್ಣ, ರವಿಕುಮಾರ್, ಶಂಕರ್, ಮಹಾದೇವಮ್ಮ, ಹಾಲು ಪರೀಕ್ಷಕ ಸತೀಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ




