ಮೊಳಕಾಲ್ಮುರು: ಅಂಚೆ ಇಲಾಖೆಯು ಸುಮಾರು 150 ವರ್ಷಗಳ ಹಳೆಯ ಇಲಾಖೆಯಾಗಿದ್ದು, ಇಲಾಖೆಯು ತುಂಬಾ ಪ್ರಮುಖವಾದದ್ದು ಎಂದು ಚಿತ್ರದುರ್ಗ ಸಂಸದರಾದ ಗೋವಿಂದ ಎಂ ಕಾರಜೋಳ ರವರು ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಕೇಂದ್ರ ಸರ್ಕಾರ, ಸಂಪರ್ಕ ಸಚಿವಾಲಯ ಅಂಚೆ ಕಚೇರಿ, ಚಿತ್ರದುರ್ಗ ಅಂಚೆ ವಿಭಾಗ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಅನುದಾನ ಅಡಿಯಲ್ಲಿ ಮುಂಜೂರಾದ ಒಂದು ಪಾಯಿಂಟ್ 20 ಕೋಟಿ ವೆಚ್ಚದ ಅಂಚೆ ಕಚೇರಿಯ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಒಂದು ಕಾಲಘಟ್ಟದಲ್ಲಿ ಅಂಚೆ ಇಲಾಖೆಯು ಉತ್ತಮ ಕೆಲಸ ಮಾಡುತ್ತಾ ಬಂದಿದೆ ತಮ್ಮ ಬಂಧು ಬಳಗದಿಂದ ಗೆಳೆಯರಿಂದ ಶಾಲಾ ಮಕ್ಕಳಿಂದ ಸರ್ಕಾರಿ ಕಚೇರಿಗಳಿಂದ ಪತ್ರಗಳನ್ನು ಬರೆಯುವುದನ್ನು ಕಾಯುತ್ತಿದ್ದರು. ಪೋಸ್ಟ್ ಮಾಸ್ಟರ್ ಗೆ ಹೋಗಿ ನನ್ನ ಪತ್ರ ಬರಬೇಕಿತ್ತು ಬಂದಿದೆ ಎಂದು ಕೇಳುತ್ತಿದ್ದರು ಅಂತಹ ಕಾಲಾವಂದಿತ್ತು ಈಗ ಕಂಪ್ಯೂಟರ್ ಕಾಲ ಎಲ್ಲವನ್ನು ಮೊಬೈಲ್ ನಲ್ಲಿ ನೋಡುತ್ತಾರೆ. ಹಳ್ಳಿ ಭಾಗದಲ್ಲಿ ಪೋಸ್ಟ್ ಮಾಸ್ಟರ್ ಗಳು ಉತ್ತಮ ಕೆಲಸ ಮಾಡುತ್ತಿದ್ದರು ಪ್ರಾಮಾಣಿಕವಾಗಿ ಮಾಡುತ್ತಿದ್ದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ 1947ರಲ್ಲಿ 23 ಸಾವಿರದ 600 ಅಂಚೆ ಕಚೇರಿಗಳು ಇಡೀ ದೇಶದಲ್ಲಿ ಇದ್ದವು, ಮತ್ತೆ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ 1 ಲಕ್ಷ 65,000 ಅಂಚೆ ಕಚೇರಿಗಳು ದೇಶದಲ್ಲಿ ಇವೆ. ದೇಶದಲ್ಲಿ ಮೊಟ್ಟ ಮೊದಲ ಅಂಚೆ ಕಛೇರಿ ಮುಂಬೈನಲ್ಲಿ.
ಕಾಲ ಬದಲಾಗಿದ್ದರಿಂದ ಕಂಪ್ಯೂಟರ್ ಕಾಲದಲ್ಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಕಾರ್ಯ ಅಂಚೆ ಕಚೇರಿ ಮಾಡುತ್ತಿದೆ.
2004 ರಿಂದ2014 ರ ವರೆಗೂ ಯುಪಿಐ ಸರ್ಕಾರದಲ್ಲಿ 10 ವರ್ಷಗಳಲ್ಲಿ 600 ಅಂಚೆ ಕಚೇರಿಗಳು ಮುಚ್ಚಲಾಗಿತ್ತು, ಆದರೆ ನರೇಂದ್ರ ಮೋದಿ ಆಡಳಿತದಲ್ಲಿ 9 ಸಾವಿರ ಹೆಚ್ಚು ಹಂಚಿಕೆ ಕಚೇರಿಗಳು ಪ್ರಾರಂಭವಾದವು, ನರೇಂದ್ರ ಮೋದಿಯವರು ಅಂಚೆ ಕಚೇರಿಗಳ ಬಗ್ಗೆ ಬಹಳಷ್ಟು ಗಮನ ಕೊಡುತ್ತಿದ್ದಾರೆ, ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ವ್ಯವಸ್ಥೆಯನ್ನು ಕಣ್ಣಾರೆ ಕಂಡು ಅನುಭವಿಸಿದಂತಹ ವ್ಯಕ್ತಿ. ಲಾಭ ನಷ್ಟದ ಪ್ರಶ್ನೆ ಇಲ್ಲ ಸೇವಾಮನಭವದಿಂದ ಅಂಚೆ ಕಚೇರಿಯನ್ನು ನಡೆಸುವಂತಹ ಕೆಲಸ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಒಂದು ಲಕ್ಷದ ಅರವತ್ತು ಸಾವಿರ ಅಂಚೆ ಕಚೇರಿಗಳನ್ನು ಕೋರ್ಬ್ಯಾಂಕಿಂಗ್ಗಾಗಿ ಪರಿವರ್ತನೆ ಅಂಚೆ ಕಚೇರಿಗಳನ್ನು ಪಾಸ್ಪೋರ್ಟ್ ಕೊಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಮತ್ತು ಹದಿಮೂರು ಸಾವಿರ ಹಂಚಿ ಕಚೇರಿಗಳನ್ನು ಆಧಾರ್ ಸೇವಾ ಕೇಂದ್ರಗಳನ್ನು ಪರಿವರ್ತನೆ ಮಾಡಿದ್ದಾರೆ ಹೀಗೆ ಹಲವಾರು ಹೊಸ ವಿಧಾನಗಳನ್ನು ಅಂಚೆ ಕಚೇರಿಗೆ ನೀಡಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಅಪಘಾತದಲ್ಲಿ ಮೃತ ಹೊಂದಿದ್ದ ವ್ಯಕ್ತಿಗೆ 10 ಲಕ್ಷದ ಚೆಕ್ಕನ್ನು ವಿತರಣೆ ಮಾಡಿದರು ರುದ್ರಯ್ಯ ಹೆಂಡತಿ ಲಕ್ಷ್ಮೀದೇವರಿಗೆ ಸಂಸದರು ಚೆಕ್ಕನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ತಾರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಲೀಲಾವತಿ ಸಿದ್ದಣ್ಣ ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ಮಂಡಲ ಅಧ್ಯಕ್ಷರಾದ ಶ್ರೀರಾಮ ರೆಡ್ಡಿ ಡಾ.ಪಿ.ಎಂ ಮಂಜುನಾಥ್, ಪಟ್ಟಣ ಪಂಚಾಯತಿ ಸದಸ್ಯರಾದ ಶುಭ ಪೃಥ್ವಿರಾಜ್, ಭಾಗ್ಯಮ್ಮ ಭೀಮಣ್ಣ, ಅರ್ಜುನ್, ಮುಖಂಡರುಗಳಾದ ಚಂದ್ರಶೇಖರ್ ಗೌಡ ಕೊಂಡ್ಲಹಳ್ಳಿ ರೇವಣ್ಣ ಯುವ ಮುಖಂಡರಾದ ತುಮಕೂರ್ಲ ಹಳ್ಳಿ ಮಂಜುನಾಥ್, ಡಿಶ್ ರಾಜು ಪ್ರಭು ಸಿದ್ದಾರ್ಥ್ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಪಿಎಂ ಗಂಗಾಧರ