ಚಂಡೀಗಢ(ಪಂಜಾಬ್): ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಮೊಹಾಲಿ ನ್ಯಾಯಾಲಯ ಪಾದ್ರಿ ಬಜೀಂದರ್ ಸಿಂಗ್ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮೊಹಾಲಿಯ ಜಿರಾಕ್‌ಪುರದ ಸಂತ್ರಸ್ತೆ, ಪಾದ್ರಿ ಬಜೀಂದರ್ ಸಿಂಗ್ ವಿರುದ್ಧ 2018ರಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಸಂಬಂಧ ಪಾದ್ರಿ ಬಜೀಂದರ್ ಸಿಂಗ್ ಇಂದು ನ್ಯಾಯಾಲಯಕ್ಕೆ ಹಾಜರಾದರು. ಅಪರಾಧಿ ಸಮ್ಮುಖದಲ್ಲೇ ನ್ಯಾಯಧೀಶರು ಶಿಕ್ಷೆ ಪ್ರಕಟಿಸಿದರು.
ಮೂರು ದಿನಗಳ ಹಿಂದೆ ಮೊಹಾಲಿ ನ್ಯಾಯಾಲಯವು ಪಾದ್ರಿ ಬಜೀಂದರ್ ಸಿಂಗ್ನನ್ನು ಅಪರಾಧಿ ಎಂದು ಘೋಷಿಸಿ, ಪಟಿಯಾಲ ಜೈಲಿಗೆ ಕಳುಹಿಸಿತ್ತು.
ಸಂತ್ರಸ್ತೆಯನ್ನು ವಿದೇಶಕ್ಕೆ ಕಳುಹಿಸುವ ನೆಪದಲ್ಲಿ ಪಾದ್ರಿ ಬಜೀಂದರ್ ಸಿಂಗ್, ಆಕೆಯನ್ನು ಮನೆಗೆ ಕರೆದೊಯ್ದು ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿ ಮತ್ತು ಲೈಂಗಿಕ ದೌರ್ಜನ್ಯದ ವಿಡಿಯೋ ಮಾಡಿದ್ದ. ಈ ಬಗ್ಗೆ ದೂರು ನೀಡಿದರೆ ಆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಪಾದ್ರಿಯ ವಿರುದ್ಧ 2018 ರಲ್ಲಿ ಮೊಹಾಲಿಯ ಜಿರಾಕ್‌ಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಹಲ್ಲೆ ಮತ್ತು ಬೆದರಿಕೆ ಪ್ರಕರಣ ದಾಖಲಾಗಿತ್ತು.
ಸಂತ್ರಸ್ತೆ ಆರೋಪೇನು?: ತಾನು ವಿದೇಶದಲ್ಲಿ ನೆಲೆಸಲು ಬಯಸಿದ್ದರಿಂದ ಪಾದ್ರಿ ಬಜೀಂದರ್‌ನನ್ನು ಸಂಪರ್ಕಿಸಿದೆ. ನಂತರ ಅವರ ನನ್ನನ್ನು ಮೊಹಾಲಿಯ ಸೆಕ್ಟರ್ 63ರ ರಲ್ಲಿರುವ ತನ್ನ ಮನೆಗೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ಎಸಗಿ ಅದರ ವಿಡಿಯೋ ಮಾಡಿದ್ದನು ಎಂದು ಸಂತ್ರಸ್ತೆ ಆರೋಪಿಸಿದ್ದರು. ನಂತರ, ಆಕೆಯ ದೂರಿನ ಆಧಾರದ ಮೇಲೆ ಬಜೀಂದರ್ ಸಿಂಗ್ನನ್ನು 2018ರಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಜೀಂದರ್ ಸಿಂಗ್ ಬಿಡುಗಡೆಯಾಗಿದ್ದ.
ಈ ವರ್ಷದ ಮಾರ್ಚ್ 3 ರಂದು ನ್ಯಾಯಾಲಯ ಬಜೀಂದರ್ ಸಿಂಗ್ ಮತ್ತು ಇತರ ಐದು ಮಂದಿ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತು.
ಬಜೀಂದರ್ ವಿರುದ್ಧ ಇನ್ನೂ ಎರಡು ಪ್ರಕರಣ ದಾಖಲು: ಪಾದ್ರಿ ಅತ್ಯಾಚಾರ ಮಾಡುವುದಕ್ಕೂ ಮೊದಲು ಸಂತ್ರಸ್ತೆಗೆ ಮಾದಕವಸ್ತು ನೀಡಲಾಗಿತ್ತು. ವೈದ್ಯಕೀಯ ಮತ್ತು ಡಿಎನ್‌ಎ ಪರೀಕ್ಷೆಗಳು ಬಜೀಂದರ್ ವಿರುದ್ಧದ ಆರೋಪಗಳನ್ನು ದೃಢಪಡಿಸಿವೆ. ಇಬ್ಬರು ಮಹಿಳೆಯರ ಪ್ರತ್ಯೇಕವಾಗಿ ನೀಡಿದ ದೂರಿನ ಮೇರೆಗೆ ಕಪುರ್ತಲಾ ಮತ್ತು ಮೊಹಾಲಿಯಲ್ಲಿ ಬಜೀಂದರ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿವೆ.