ಬಿಗ್ ಬಾಸ್ ಕನ್ನಡ ಸೀಸನ್ 10ರ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಡ್ರೋನ್ ಪ್ರತಾಪ್, ಬಿಗ್ ಬಾಸ್ ಮುಗಿದ ಮೇಲೆ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ಕೆಲ ದಿನಗಳು ಕಾಣಿಸಿಕೊಂಡಿದ್ದರು. ಇದೀಗ ಮತ್ತೊಂದು ಕಿರುತೆರೆ ರಿಯಾಲಿಟಿ ಶೋ ಒಪ್ಪಿಕೊಂಡಿರುವ ಡ್ರೋನ್ ಪ್ರತಾಪ್, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರಲ್ಲಿ ಸ್ಪರ್ಧಿಸುತ್ತಿದ್ದಾರೆ.
ಕಾರ್ಯಕ್ರಮ ಆರಂಭವಾದ ದಿನದಿಂದಲೂ ವೇದಿಕೆ ಮೇಲೆ ತೀರಾ ಮುಜುಗರದಿಂದ ಮಾತನಾಡುತ್ತಿದ್ದ ಡ್ರೋನ್ ಪ್ರತಾಪ್‌ಗೆ ನಟಿ ರಚಿತಾ ರಾಮ್ ಮಾತಿನಿಂದ ಧೈರ್ಯ ತುಂಬಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ಪ್ರತಿಸಲ ಮಾತನಾಡುವಾಗಲೂ ನಿಮಗೆ ಯಾಕಷ್ಟು ಮುಜುಗರ ಮತ್ತು ಹಿಂಜರಿಕೆ ಎಂದು ರಚಿತಾ ರಾಮ್ ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗೆ ಡ್ರೋನ್ ಪ್ರತಾಪ್ ಮೀಡಿಯಾ ಭಯ ಎಂದು ಉತ್ತರಿಸಿದ್ದಾರೆ. ಈ ವೇಳೆ ಡ್ರೋನ್ ಪ್ರತಾಪ್‌ಗೆ ಧೈರ್ಯ ತುಂಬಿದ ರಚಿತಾ ರಾಮ್, ‘ಎಂತಹ ಒಳ್ಳೆ ವೇದಿಕೆ ಇದು ಪ್ರತಾಪ್, ನೀವು ನೀವಾಗಿದ್ದು, ಇಲ್ಲಿ ಏನು ಬೇಕಾದರೂ ಮಾತನಾಡಬಹುದು. ಇಲ್ಲಿ ಯಾರು ನಿಮ್ಮನ್ನು ಜಡ್ಜ್ ಮಾಡಲ್ಲ. ಅದನೆಲ್ಲಾ ತಲೆಯಿಂದ ತೆಗೆದು ಹಾಕಿ. ಯಾರಿಗೋಸ್ಕರ ಬದುಕುತ್ತಿದ್ದೀರಾ ನೀವು. ಮೊದಲ ದಿನ ಇಲ್ಲಿಗೆ ಬಂದಾಗ ಏನು ಹೇಳಿದ್ರಿ ನೀವು ನೀವಾಗಿ ಸಂಪೂರ್ಣವಾಗಿ ಇಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ರಚಿತಾ ರಾಮ್, ಡ್ರೋನ್ ಪ್ರತಾಪ್‌ಗೆ ಧೈರ್ಯ ತುಂಬಿದ್ದಾರೆ.
ರಚಿತಾ ರಾಮ್ ಮಾತಿಗೆ ಡ್ರೋನ್ ಪ್ರತಾಪ್ ಕೂಡ ಒಪ್ಪಿಕೊಂಡಿದ್ದು, ಮುಂದಿನ ದಿನಗಳಲ್ಲಿ ಬದಲಾಗುವ ಭರವಸೆ ನೀಡಿದ್ದರು. ಮಹಿಳಾ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ ರಚಿತಾ ರಾಮ್ ಮಾತಿನಿಂದ ಪ್ರೇರೇಪಿತರಾದ ಡ್ರೋನ್ ಪ್ರತಾಪ್ ಮುಂದಿನ ಸಂಚಿಕೆಯಲ್ಲಿ ಸಖತ್ ಮಿಂಚಿದ್ದಾರೆ. ಲುಕ್ ಜೊತೆಗೆ ಡ್ರೋನ್ ಪ್ರತಾಪ್ ತಮ್ಮ ವ್ಯಕ್ತಿತ್ವವನ್ನು ಕೂಡ ಬದಲಿಸಿಕೊಂಡಿದ್ದಾರೆ. ಮೊದಲ ಕೆಲವು ಸಂಚಿಕೆಯಲ್ಲಿ ಮುಜುಗರದ ಮುದ್ದೆಯಾಗಿದ್ದ ಡ್ರೋನ್ ಪ್ರತಾಪ್ ಕಳೆದ ಸಂಚಿಕೆಯಲ್ಲಿ ಬಿಂದಾಸ್ ಬಾಯ್ ಆಗಿದ್ದಾರೆ.
ಎಲ್ಲರ ಗಮನ ಸೆಳೆದಿದ್ದಾರೆ. ಈ ವೇಳೆ ರಚಿತಾ ರಾಮ್ ಅವರು ಬಾಣ ಬಿಟ್ಟಿದ್ದರು. ಮೇಡಂ ಹೇಳಿದ ಮಾತುಗಳನ್ನು ತಲೆಯಲ್ಲಿ ಇಟ್ಟುಕೊಂಡು ಕೆಲಸ ಮಾಡಿ ಒಂದು ಧೈರ್ಯ ತೆಗೆದುಕೊಂಡು ವೇದಿಕೆ ಮೇಲೆ ಬಂದಿದ್ದೇನೆ ಎಂದಿದ್ದಾರೆ. ಡ್ರೋನ್ ಪ್ರತಾಪ್ ಪಾರ್ಟಿ ಬಾಯ್ ಲುಕ್‌ಗೆ ಎಲ್ಲರೂ ಫಿದಾ ಆಗಿದ್ದು, ರಚಿತಾ ರಾಮ್ ಇದು ಡ್ರೋನ್ ಪ್ರತಾಪ್ ಎಂದರೆ ಎಂದು ಹೊಗಳಿದ್ದಾರೆ.




