Ad imageAd image

ಭಕ್ತ ಸಾಗರದ ಮಧ್ಯೆ ವೈಭವದಿಂದ ನಡೆದ ರಾಚೋಟಿ ವೀರಭದ್ರೇಶ್ವರ ಜಾತ್ರೆ

Bharath Vaibhav
ಭಕ್ತ ಸಾಗರದ ಮಧ್ಯೆ ವೈಭವದಿಂದ ನಡೆದ ರಾಚೋಟಿ ವೀರಭದ್ರೇಶ್ವರ ಜಾತ್ರೆ
WhatsApp Group Join Now
Telegram Group Join Now

ಯಾದಗಿರಿ :-ಚಿತ್ತಾಪೂರ ಮುಖ್ಯರಸ್ತೆ ಮಧ್ಯದಲ್ಲಿ ನೆಲೆಸಿರುವ ಶ್ರೀ ರಾಚೋಟಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಭಕ್ತ ಸಾಗರದ ಮಧ್ಯೆ ಅದ್ಧೂರಿಯಾಗಿ ಶ್ರಾವಣ ಮಾಸದ ನಾಲ್ಕನೆ ಸೋಮವಾರ ದಿವಸದಂದು ವೈಭವದಿಂದ ನೆರವೇರಿತು ಐತಿಹಾಸಿಕ ಪರಂಪರೆ ಹೊಂದಿದ ಶತಮಾನದಿಂದಲೂ ವಿಶೇಷ ಪೂಜೆಗಳು ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ ಭಜನೆಗಳು ಈ ಒಂದು ದೇವಸ್ಥಾನದಲ್ಲಿ ನಡೆಸಿಕೊಂಡು ಬರುತ್ತಿದ್ದು,

ಈಭಾಗದ ಭಕ್ತಾದಿಗಳಿಗೆ ಭಯ ಭಕ್ತಿಯ ಪುಣ್ಯಕ್ಷೇತ್ರವಾಗಿ ಹೊರಹೊಮ್ಮಿದೆ ಎತ್ತರವಾದ ಪ್ರದೇಶ ಹೊಂದಿರುವ ಕಲ್ಲು ಬಂಡೆಯ ಮದ್ಯ ವೀರಭದ್ರೇಶ್ವರ ಸ್ವಾಮಿ ನೆಲೆಸಿರುವುದು ವಿಶೇಷವಾಗಿ ಭಕ್ತಿಯ ವೈಶಿಷ್ಟ್ಯತೆ ಪಡೆದಿದೆ ಪ್ರತಿ ವರ್ಷವೂ ಕೂಡ ಶ್ರಾವಣ ಮಾಸದ ನಾಲ್ಕನೆ ಸೋಮವಾರ ದಿವಸ ಮಠಾಧಿಪತಿಗಳು ಹಾಗೂ ಭಕ್ತರಿಂದ ದೇವುಸ್ಥಾನವನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ ಬಿಳಿ ಮತ್ತು ಕೇಸರಿ ಬಣ್ಣದಿಂದ ಕಂಗೊಳಿಸಿ ಮೂರ್ತಿಗೆ ವಿಶೇಷವಾದ ಅಭಿಷೇಕಗಳನ್ನು ಮಾಡಿ ವಿವಿಧ ಬಗೆಯ ಹೂಗಳಿಂದ ಅಲಂಕಾರಗೊಳಿಸಿ ಭಯ ಭಕ್ತಿಯಿಂದ ಕಟ್ಟುನಿಟ್ಟಾಗಿ ಜಾತ್ರಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ .

ನುರಿತ ಪುರೋಹಿತರನ್ನು ಕರೆಸಿ ವೀರಭದ್ರೇಶನ ವೇಷಭೂಷಣದೊಂದಿಗೆ ಉಡುಪುಗಳನ್ನು ಧರಿಸಿ ವೀರಭದ್ರನ ಒಡಪುಗಳು ಹೇಳುವ ಮೂಲಕ ಭಕ್ತಿಯ ಸಂಕೇತವನ್ನು ಸಾರುತ್ತ ಪಲ್ಲಕ್ಕಿ ಉತ್ಸವದ ಮೆರವಣಿಗೆಯನ್ನು ಕೈಗೊಳ್ಳುತ್ತಾರೆ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸಿಹಿಯಾದ ಅಡುಗೆಯನ್ನು ತಯಾರಿಸಿ ಅಣ್ಣ ಪ್ರಸಾದ ವ್ಯವಸ್ಥೆ ಮಾಡಿರುತ್ತಾರೆ ಬಿದರ ಗುಲ್ಬರ್ಗ ಯಾದಗಿರಿ ರಾಯಚೂರು ಕೊಪ್ಪಳ ಬಳ್ಳಾರಿ ವಿಜಯಪುರ ಇನ್ನು ಮುಂತಾದ ಭಾಗಗಳಿಂದ ಸಾವಿರಾರು ಭಕ್ತಾದಿಗಳು ಈ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಭಕ್ತಿಯ ನಮನಗಳನ್ನು ಸಲ್ಲಿಸುತ್ತಾರೆ

ವರದಿ:- ಮಲ್ಲಿಕಾರ್ಜುನ ದೋಟಿಹಾಳ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!