ಚನ್ನಮ್ಮನ ಕಿತ್ತೂರು: ಕಿತ್ತೂರಿನ ರಾಜಗುರು ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳು ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ರಾಧಾಕೃಷ್ಣ ವೇಷಭೂಷಣಗಳನ್ನು ತೊಟ್ಟು ಸಂಭ್ರಮಿಸಿದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲೆಯಲ್ಲಿ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಶ್ರೀ ಕೃಷ್ಣನ ಭಾವಚಿತ್ರಕ್ಕೆ ಶಿಕ್ಷಕರು ಮತ್ತು ಪುಟಾಣಿ ಮಕ್ಕಳು ಪೂಜೆ ಸಲ್ಲಿಸಿದರು.
ಶಾಲೆಯ ಸಿ ಇ ಓ ಶ್ರೀ ಮತಿ ಲಕ್ಷೀ ಮಲ್ಲಿಕಾರ್ಜುನ ಲಂಗೋಟಿ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ನಮ್ಮ ರಾಜಗುರು ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ಆಚರಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಒಂದು ವಿಭಿನ್ನ ರೀತಿಯ ಸಂದೇಶದೊಂದಿಗೆ ನಮ್ಮ ಶಾಲೆಯಲ್ಲಿ ಶ್ರೀ ಕೃಷ್ಣನ ಆರಾಧನೆಯನ್ನು ಮಾಡಲಾಯಿತು. ಶ್ರೀ ಕೃಷ್ಣನ ಜನ್ಮಾಷ್ಟಮಿಯಲ್ಲಿ ಭಗವದ್ಗೀತೆಯಲ್ಲಿ ಬರುವ ಶ್ಲೋಕಗಳನ್ನು ಪಠಣೆ ಮಾಡುವುದಾಗಿತ್ತು ಕಾರಣ ಇಷ್ಟೇ ಭಗವದ್ಗೀತೆಯು ಹಿಂದೂ ಧರ್ಮದ ಪವಿತ್ರ ಗ್ರಂಥಗಳಲ್ಲಿ ಒಂದಾಗಿದೆ ಇದು ಭಗವಾನ್ ಕೃಷ್ಣ ಮತ್ತು ಅರ್ಜನನ ನಡುವಿನ ಸಂಭಾಷಣೆಯನ್ನು ಒಳಗೊಂಡಿದೆ ಈ ಗ್ರಂಥವು ಜೀವನದ ಸಾರಾಂಶ ಕರ್ತವ್ಯ ಭಕ್ತಿ ಮತ್ತು ಜ್ಞಾನದ ಬಗ್ಗೆ ಅಮೂಲ್ಯವಾದ ಮಾರ್ಗದರ್ಶನವನ್ನು ನೀಡುತ್ತದೆ.
ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುವಾದ ಹಬ್ಬ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ.
ಈ ರೀತಿಯ ಭಕ್ತಿ ಪ್ರಧಾನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರ ಮೂಲಕ ಮಕ್ಕಳಿಗೆ ಆಧ್ಯಾತ್ಮಿಕತೆಯ ಬಗ್ಗೆ ಅರಿವು ಮೂಡಿಸೋಣ ಎಂದು ರಾಜಗುರು ಶಾಲೆಯ ಸಿ ಇ ಓ ಶ್ರೀ ಮತಿ ಲಕ್ಷೀ ಮಲ್ಲಿಕಾರ್ಜುನ ಲಂಗೋಟಿ ಅವರು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮತಿ ರಾಜೇಶ್ವರಿ ಕಳಸಣ್ಣವರ ಅವರು ಮಾತನಾಡಿ ಜೀವನದ ಪ್ರತಿಯೊಂದು ಹಂತದಲ್ಲೂ ನ್ಯಾಯ ಧರ್ಮದ ಮಾರ್ಗದರ್ಶನ ನೀಡಿದ ಶ್ರೀ ಕೃಷ್ಣ ಪರಮಾತ್ಮನು ನಮ್ಮ ನಿಮ್ಮೆಲ್ಲರ ಕಷ್ಟಗಳನ್ನು ದೂರಮಾಡಿ ಸಂತೋಷ ಮತ್ತು ಯಶಸ್ಸು ನೀಡಲೆಂದರು.
ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷಧರಿಸಿ ನೃತ್ಯ ಹಾಡುಗಳನ್ನು ಹೇಳುವುದರ ಮೂಲಕ ಕಾರ್ಯಕ್ರಮವನ್ನ ಮೆರಗು ಹೆಚ್ಚಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಮತಿ ದೀನಾ ಲಂಗೋಟಿ, ಕಾವ್ಯ ಪೂಜೆರ ನಿರೂಪಿಸಿದರು, ಸುನಂದ ಬುದ್ನಿ ಸ್ವಾಗತಿಸಿದರು. ಸಂಗೀತ ಬೆಳಗಾವಿ ವಂದನಾರ್ಪಣೆ ಮಾಡಿದರು. ಶಿಕ್ಷಕಿಯರು. ಬಸವರಾಜ ಭೀಮರಾಣಿ, ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಶ್ರೀ ಮತಿ ರಾಜೇಶ್ವರಿ ಕಳಸಣ್ಣವರ ಅವರು ಮಾತನಾಡಿ ಜೀವನದ ಪ್ರತಿಯೊಂದು ಹಂತದಲ್ಲೂ ನ್ಯಾಯ ಧರ್ಮದ ನಂಬಿಕೆಯಲ್ಲಿ ಜೀವನದ ಮಾರ್ಗದರ್ಶನ ನೀಡಿದ ಶ್ರೀ ಕೃಷ್ಣ ಪರಮಾತ್ಮನು ನಮ್ಮ ನಿಮ್ಮಲ್ಲರ ಕಷ್ಟಗಳನ್ನು ದೂರಮಾಡಿ ಸಂತೋಷ ಮತ್ತು ಯಶಸ್ಸು ನೀಡಲೆಂದರು.
ವರದಿ: ಜಗದೀಶ ಕಡೋಲಿ




